alex Certify ಹಿಮದಿಂದಾವೃತವಾದ ರಸ್ತೆಯಲ್ಲಿ ಈ ಕೆಲಸ ಮಾಡಿ ಸುದ್ದಿಯಾದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮದಿಂದಾವೃತವಾದ ರಸ್ತೆಯಲ್ಲಿ ಈ ಕೆಲಸ ಮಾಡಿ ಸುದ್ದಿಯಾದ ಮಹಿಳೆ..!

ಹಿಮದಿಂದ ಆವೃತವಾದ ಪ್ರದೇಶದಲ್ಲಿ ಡೈರಿ ಟ್ರಕ್​ ಒಂದನ್ನ ಮಹಿಳೆ ತಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸೂಪರ್​ವುಮನ್​ ಎಂಬ ಬಿರುದನ್ನ ಪಡೆಯುತ್ತಿದ್ದಾರೆ. ಅಂದಹಾಗೆ ಈ ಘಟನೆ ಬ್ರಿಟನ್​ನಲ್ಲಿ ನಡೆದಿದೆ.

ಬೃಹತ್​ ಟ್ರಕ್​ವೊಂದನ್ನ 33 ವರ್ಷದ ಕ್ಯಾರ್ಲೆನ್​ ಲೆಸ್ಲಿ ಎಂಬವರು ಹಿಂಬದಿಯಿಂದ ನೂಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಮೂರು ಮಕ್ಕಳ ತಾಯಿಯಾಗಿರುವ ಕ್ಯಾರ್ಲೆನ್​​ ವಿಡಿಯೋ ವೈರಲ್​ ಆಗಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಕೆ ನೂಕಿದ ಟ್ರಕ್​ ಮಾಲೀಕತ್ವದ ಡೈರಿಯು ಆಕೆಗೆ ಒಂದು ವರ್ಷಗಳವರೆಗೆ ತನ್ನ ಕಂಪನಿಯ ಎಲ್ಲಾ ಡೈರಿ ಪ್ರಾಡಕ್ಟ್​ಗಳನ್ನ ಉಚಿತವಾಗಿ ನೀಡಲಿದೆ ಎಂದಿದೆ.

ಶರ್ಟ್​ ಬಟನ್​ ಒಟ್ಟುಗೂಡಿಸಿದವನಿಗೆ ವಿಶ್ವ ದಾಖಲೆಯ ಪಟ್ಟ

ಸೂಪರ್​ ಮಾರ್ಕೆಟ್​​ನಲ್ಲಿ ಕೆಲಸ ಮಾಡುತ್ತಿರುವ ಕ್ಯಾರ್ಲೆನ್​ ತನ್ನ ಮಕ್ಕಳ ಜೊತೆ ಅಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಟ್ರಕ್​ವೊಂದು ಹಿಮಾವೃತ ರಸ್ತೆಯಲ್ಲಿ ಚಲಿಸಲು ಹೆಣಗಾಡುತ್ತಿರೋದನ್ನ ಕಂಡಿದ್ದಾರೆ. ಕೂಡಲೇ ಅಲ್ಲೇ ಇದ್ದ ನರೆ ಹೊರೆಯವರ ಬಳಿ ತನ್ನ ಮಕ್ಕಳನ್ನ ನೋಡಿಕೊಳ್ಳುವಂತೆ ಹೇಳಿ ಟ್ರಕ್​ ಚಾಲಕನಿಗೆ ನೆರವಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...