1990ರ ದಶಕದ ಅತ್ಯಂತ ಪ್ರಸಿದ್ಧ ಮಾಡೆಲ್ಗಳಲ್ಲಿ ಒಬ್ಬರಾಗಿದ್ದ ಸ್ಟೆಲ್ಲಾ ಟೆನೆಂಟ್ ತಮ್ಮ 50ನೇ ವಯಸ್ಸಿಗೆ ನಿಧನರಾಗಿದ್ದಾರೆ.
ಡಿಸೆಂಬರ್ 22 ರಂದು ಸ್ಟೆಲ್ಲಾ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
50 ವರ್ಷದ ಮಾಡೆಲ್ ಹಠಾತ್ ನಿಧನದ ವಾರ್ತೆ ಕೇಳುತ್ತಿದ್ದಂತೆಯೇ ಸ್ಕಾಟಿಶ್ ಗಡಿಯಲ್ಲಿನ ಡನ್ಸ್ ಪಟ್ಟಣಕ್ಕೆ ಪೊಲೀಸರು ಆಗಮಿಸಿದ್ದಾರೆ.
ಹಾಗೂ ಯಾವುದೇ ಅನುಮಾನಾಸ್ಪದ ಘಟನೆಗಳು ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 17ರಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದ ಸ್ಟೆಲ್ಲಾ 90ರ ದಶಕದಲ್ಲಿ ಮಾಡೆಲಿಂಗ್ ಲೋಕವನ್ನ ಆಳಿದ್ದರು. ಸುಪ್ರಸಿದ್ಧ ಫ್ಯಾಶನ್ ಬ್ರ್ಯಾಂಡ್ಗಳಾದ ಟೆನೆಂಟ್, ಶನೆಲ್, ವರ್ಸೇಸ್ ಮತ್ತು ವ್ಯಾಲೆಂಟಿನೋ ಜೊತೆ ಸ್ಟೆಲ್ಲಾ ಕೆಲಸ ಮಾಡಿದ್ದಾರೆ.