alex Certify ಆಸ್ಟ್ರೇಲಿಯಾದ ಈ ಹೋಟೆಲ್ ʼಟೀಂ ಇಂಡಿಯಾʼ ಫೇವರೆಟ್​ ಪ್ಲೇಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾದ ಈ ಹೋಟೆಲ್ ʼಟೀಂ ಇಂಡಿಯಾʼ ಫೇವರೆಟ್​ ಪ್ಲೇಸ್​

ಮೆಲ್ಬೋರ್ನ್​ನ ಫ್ಲಿಂಡರ್ಸ್ ಸ್ಟ್ರೀಟ್​ ಒಂದು ಅಪ್ರತಿಮ ಸ್ಥಳವಾಗಿದೆ. ಇಲ್ಲಿ ಆಸ್ಟ್ರೇಲಿಯಾಗೆ ಸಂಬಂಧ ಪಟ್ಟ ಅಂಗಡಿಗಳು ಇರೋದ್ರ ಜೊತೆಗೆ ಥೇಟ್​ ಭಾರತೀಯ ಶೈಲಿಯ ಧಾಬಾ ಕೂಡ ನಿರ್ಮಾಣವಾಗಿದೆ. ಕ್ರಿಕೆಟ್​ಗೆಂದು ಆಸ್ಟ್ರೇಲಿಯಾಗೆ ಪ್ರಯಾಣ ಮಾಡುವ ಟೀಂ ಇಂಡಿಯಾ ಆಟಗಾರರಿಗೆ ಈ ಧಾಬಾಗಳು ಫೇವರಿಟ್​ ತಾಣವಾಗಿ ಬದಲಾಗಿವೆ,

ಈ ಡಾಬಾಗೆ ಇತ್ತೀಚಿಗೆ ಭೇಟಿ ನೀಡಿದವರೆಂದರೆ ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್​ ಗವಾಸ್ಕರ್​, ಇಲ್ಲಿನ ಡಾಬಾಗಳ ಆತಿಥ್ಯ ಹಾಗೂ ಖಾದ್ಯಗಳ ರುಚಿಯನ್ನ ಕಂಡು ಗವಾಸ್ಕರ್ ಫುಲ್​ ಫಿದಾ ಆಗಿದ್ದಾರಂತೆ. ಬರೋಬ್ಬರಿ 1 ತಿಂಗಳು ಬಳಿಕ ನನಗೆ ಭಾರತೀಯ ಶೈಲಿಯ ಊಟ ಮಾಡಿದ್ದಕ್ಕೆ ತುಂಬಾ ಸಂತಸವಾಯ್ತು ಎಂದಿದ್ದಾರೆ.

ಇನ್ನು ಡಾಬಾದ ತುಂಬೆಲ್ಲ ಟೀಂ ಇಂಡಿಯಾ ಕ್ರಿಕೆಟ್​ ಆಟಗಾರರು ಹಾಗೂ ಬಾಲಿವುಡ್​ ತಾರೆಯರ ಫೋಟೊಗಳನ್ನ ಹಾಕಲಾಗಿದೆ. ಈ ವಿಚಾರವಾಗಿ ಮಾತನಾಡಿದ ಈ ಸ್ಥಳದ ಮಾಲೀಕ ಅಮಿತ್​ ತುಟೆಜಾ, ನಮ್ಮ ಆಹಾರದ ಗುಣಮಟ್ಟವನ್ನ ಮೆಚ್ಚಿ ಅನೇಕ ಭಾರತೀಯರು ಇಲ್ಲಿಗೆ ಭೇಟಿ ಕೊಡ್ತಾರೆ. ಅವರಿಗೆ ಈ ರೆಸ್ಟಾರೆಂಟ್​ನಲ್ಲಿ ಕೂತಾಗ ಭಾರತದಲ್ಲಿದ್ದೇನೆ ಎಂಬ ಭಾವನೆ ಬರಬೇಕು. ಹೀಗಾಗಿ ನಾವು ಈ ರೀತಿಯ ಪ್ರಯತ್ನ ಮಾಡಿದ್ದೇವೆ ಅಂತಾ ಹೇಳಿದ್ರು.
ಈ ಡಾಬಾಗೆ ಸಚಿನ್ ತೆಂಡೂಲ್ಕರ್​, ವಿರಾಟ್​ ಕೊಹ್ಲಿ, ರಿಷಬ್​ ಪಂತ್​ ಸೇರಿದಂತೆ ಅನೇಕ ಸ್ಟಾರ್​ ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...