alex Certify ಗೋಲ್ಡ್ ಫಿಶ್ ಜೀವ ಕಾಪಾಡಿದ ಶ್ವಾನ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಲ್ಡ್ ಫಿಶ್ ಜೀವ ಕಾಪಾಡಿದ ಶ್ವಾನ; ವಿಡಿಯೋ ವೈರಲ್

ಈ ಶ್ವಾನದ ಕಾರ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಂದಹಾಗೆ ಈ ಶ್ವಾನವು 2 ಮೀನುಗಳ ಜೀವ ಉಳಿಸಿದೆ.

ಸಣ್ಣ ಬೌಲ್ ಒಂದರಲ್ಲಿ ನೀರಿನಲ್ಲಿದ್ದ ಗೋಲ್ಡನ್ ಫಿಶ್ ಗಳೆರಡು ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದವು. ಅದನ್ನು ಗಮನಿಸಿದ ಶ್ವಾನ ತನ್ನ ಬಾಯಿಯಿಂದ ಮೀನನ್ನು ಎತ್ತಿ ನೀರಿನೊಳಗೆ ಹಾಕಿದೆ. ಬಳಿಕ ಮತ್ತೆ ಆ ಮೀನನ್ನು ತನ್ನ ಮೂತಿಯಿಂದ ದೂಡಿ ಜೀವಂತವಾಗಿದೆಯೇ ಎಂದು ಖಾತ್ರಿ ಮಾಡಿಕೊಂಡಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 9.4 ಲಕ್ಷ ವೀಕ್ಷಣೆ ಕಂಡಿದ್ದರೆ, 25,000 ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಜೊತೆಗೆ ನೆಟ್ಟಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೋ ಸ್ವೀಟ್, ಸಚ್ ಎ ಗುಡ್ ಬಾಯ್ ಎಂದು ಒಬ್ಬರು ಹೇಳಿದರೆ, ಮಾಲೀಕನಿಗಿಂತ ಶ್ವಾನವೇ ಬುದ್ದಿವಂತ ಎಂದು ಮತ್ತೊಬ್ಬರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...