alex Certify ಎಡ-ಬಲ ತಿಳಿಯದವರಿಗೆ ಇಲ್ಲಿದೆ ಹೊಸ ಐಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಡ-ಬಲ ತಿಳಿಯದವರಿಗೆ ಇಲ್ಲಿದೆ ಹೊಸ ಐಡಿಯಾ

Image result for Step in Right Direction: Australian Woman Gets 'L' and 'R' Tattooed on Hands to Avoid Confusion

ಸಿಡ್ನಿ: ಎಡ, ಬಲ ಹಾಗೂ ದಿಕ್ಕುಗಳ ಬಗ್ಗೆ ಮಕ್ಕಳಿಗೆ ಗೊಂದಲವಿರುವುದು ಸಹಜ.‌ ಆದರೆ, ಕೆಲವರು ದೊಡ್ಡವರಾದ ಮೇಲೂ ಈ ಗೊಂದಲದಿಂದ ತೊಂದರೆ ಅನುಭವಿಸುತ್ತಾರೆ. ಇತ್ತೀಚೆಗೆ ಕಲಾವಿದೆಯೊಬ್ಬಳು ಹಾಕಿದ ಇನ್ಸ್ಟಾಗ್ರಾಂ ಪೋಸ್ಟ್ ಅಂಥವರಿಗೆ ಪರಿಹಾರ ಸೂಚಿಸಿದೆ.

ಆಸ್ಟ್ರೇಲಿಯಾ ಸಿಡ್ನಿಯ ಅಲೆಗ್ಸಾಂಡ್ರಿಯಾದ ಕಲಾವಿದೆ ಲಾರೆನ್ ವಿಂಜರ್ ತಮ್ಮ ಎರಡೂ ಕೈಗಳ ಮೇಲೆ ಬಿಡಿಸಿದ ಟ್ಯಾಟೂವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಕೈಗಳ ಮೇಲೆ ಎಲ್ ಹಾಗೂ ಆರ್ ಎಂದು ಬರೆಯಲಾಗಿದೆ.

“ಟ್ಯಾಟೂಗಳು ಬರಿ ಸುಂದರವಲ್ಲ. ಅವು ನಿರ್ದೇಶನ ನೀಡುವ ಕೆಲಸ ಮಾಡುತ್ತವೆ. ಗುಡ್ ಲಕ್ ವಿತ್ ಆಲ್ ಫ್ಯೂಚರ್ ಡೈರೆಕ್ಷನ್ಸ್, ಹ್ಯಾಪಿ ಟು ಹೆಲ್ಪ್, ಗೈಡ್ ಯು” ಎಂದು ಕ್ಯಾಪ್ಶನ್ ನೀಡಿದ್ದಾರೆ. ಅವರ ಪೋಸ್ಟ್ ನ್ನು 4 ಸಾವಿರ ಜನ ಲೈಕ್ ಮಾಡಿದ್ದಾರೆ.

ಮನ ಕಲಕುತ್ತೆ ಮಾನವೀಯತೆಗೆ ಸಾಕ್ಷಿಯಾದ ಈ ವಿಡಿಯೋ

ಈ ವಿಷಯವನ್ನು ನಾನು ನನ್ನ ಸ್ನೇಹಿತರ ಬಳಿ ಹೇಳಿದಾಗ ವಿಚಿತ್ರ ಪ್ರತಿಕ್ರಿಯೆ ನೀಡಿದರು. ಆದರೆ, ನಾನು ಆ ರೀತಿ ಬರೆದುಕೊಂಡ ನಂತರ ನೃತ್ಯ ತಂಡದ ನಾಯಕಿಯಾದೆ ಎಂದು ಲಾರೆನ್ ಡೇಲಿ ಮೇಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆಕೆಯನ್ನು ನೋಡಿ ಈಗ ಆಸ್ಟ್ರೇಲಿಯಾದ ಡಿ ಕೋಡಿಯಾ ಲಿನೆ ಎಂಬ 23 ವರ್ಷದ ಮಹಿಳೆ ಸಹ ಕೈಗಳ ಮೇಲೆ ಎಲ್ ಹಾಗೂ ಆರ್ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CK0CvJnh8yB/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...