alex Certify ಮನ ಕಲಕುತ್ತೆ ಮಾನವೀಯತೆಗೆ ಸಾಕ್ಷಿಯಾದ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಕಲಕುತ್ತೆ ಮಾನವೀಯತೆಗೆ ಸಾಕ್ಷಿಯಾದ ಈ ವಿಡಿಯೋ

ಇಂಟರ್ನೆಟ್​ನಲ್ಲಿ ಶೇರ್​ ಮಾಡಲಾದ ಹೃದಯಸ್ಪರ್ಶಿ ವಿಡಿಯೋವೊಂದರಲ್ಲಿ ರೆಸ್ಟೋರೆಂಟ್ ಸಿಬ್ಬಂದಿಯೆಲ್ಲ ಸೇರಿ ಸಹೋದ್ಯೋಗಿಗೆ ಬೈಕ್​ ಒಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಟೌಪ್ಸ್​ ಮೀಟರಿ ಎಂಬ ರೆಸ್ಟೋರೆಂಟ್ನಿಂದ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ.

ರೆಸ್ಟೋರೆಂಟ್ ಉದ್ಯೋಗಿಯೊಬ್ಬ ತನ್ನ ಬೈಕ್​ನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ತಿಳಿದು ಹಣ ಸಂಗ್ರಹಿಸಿದ ಸಹೋದ್ಯೋಗಿಗಳು ಆತನಿಗೆ ಸ್ಕೂಟರ್​ನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಪೂರ್ಣ ದೃಶ್ಯವನ್ನ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿಯಲಾಗಿದೆ ಹಾಗೂ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾಗಿದೆ. ವಿಡಿಯೋದಲ್ಲಿ ಸಹೋದ್ಯೋಗಿಗಳು ತಾವು ಗ್ರಾಹಕರು ಹಾಗೂ ಅಪರಿಚಿತರಿಂದ ದೇಣಿಗೆ ಸಂಗ್ರಹಿಸಿ ಈ ಸ್ಕೂಟರ್​ ಖರೀದಿಸಿದ್ದಾಗಿ ಹೇಳುತ್ತಾರೆ.

ಉಡುಗೊರೆಯನ್ನ ಕಂಡ ಸಿಬ್ಬಂದಿಯ ಮುಖದಲ್ಲಿ ನಗು ಮೂಡಿದ್ದ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಮಾನವೀಯತೆ ಇನ್ನೂ ಜೀವಂತಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

View this post on Instagram

A post shared by Chef Isaac Toups (@toupsmeatery)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...