alex Certify ಲಾಕ್‌ ಡೌನ್‌ ಸಮಯದಲ್ಲಿ ಖಂಡಿತವಾಗಿಯೂ ಈ ವಿಡಿಯೋವನ್ನು ನೀವು ನೋಡಿರುತ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್‌ ಸಮಯದಲ್ಲಿ ಖಂಡಿತವಾಗಿಯೂ ಈ ವಿಡಿಯೋವನ್ನು ನೀವು ನೋಡಿರುತ್ತೀರಿ…!

ಲಾಕ್ ಡೌನ್ ಸಂದರ್ಭದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದ ಮಿಮ್ಸ್ ಗಳಲ್ಲಿ ಬಳಕೆಯಾಗಿದ್ದು ಕಾಫಿನ್ ಡಾನ್ಸ್.
ಶವ ‌ಪೆಟ್ಟಿಗೆಯನ್ನು ಕುಣಿಯತ್ತಾ ತೆಗೆದುಕೊಂಡು ಹೋಗುವ ವಿಡಿಯೋವನ್ನು ಹಾಸ್ಯದ ಸನ್ನಿವೇಶಗಳಿಗೆ ಜೋಡಣೆ ಮಾಡಿ ವೈರಲ್ ಮಾಡಲಾಗಿತ್ತು.

ಇದೀಗ ಗಾನಾ ದೇಶದಲ್ಲಿ ಹೆಣ ಹೊರುವ ಪಾಲ್ ಬೇರರ್ ಗಳು ಅಲ್ಲಿನ‌ ಜನರಿಗೆ ವಿಚಿತ್ರ ರೀತಿ ಎಚ್ಚರಿಕೆ ನೀಡಿದ್ದಾರೆ. ನೀವು ಮನೆಯಲ್ಲೇ ಇರಿ, ಇಲ್ಲವಾದರೆ ನಿಮ್ಮೊಂದಿಗೆ ನಾವು ನೃತ್ಯ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ಈ ಪೊಲ್ ಬೇರರ್ ಗಳು
ಕಷ್ಟ ಸಮಯದಲ್ಲಿ ಕಾರ್ಯತತ್ಪರರಾಗಿರುವ ಆರೋಗ್ಯ ಸೇವಕರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.

ಅಂತ್ಯಕ್ರಿಯೆ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿ ಇದೆ.‌ ಕೆಲವೆಡೆ ದುಃಖವನ್ನು ಹೊರ ಹಾಕುವ ವಿಭಿನ್ನ ಬಗೆಗಳೂ ಇವೆ. ಮೌನವಾಗಿ ಶೋಕಿಸುವವರು ಕೆಲವೆಡೆಯಾದರೆ, ಸಂಭ್ರಮಿಸಿ ಕಳುಸಿಕೊಡುವ ಪದ್ಧತಿಯೂ ಇದೆ, ಅದರಲ್ಲೂ ನೂರು ವರ್ಷ ಪೂರೈಸಿದವರು ಮೃತರಾದರೆ ಸಂಭ್ರಮದಿಂದಲೇ ಕಳಿಸಿಕೊಡಲಾಗುತ್ತದೆ.

2017ರಿಂದೀಚೆಗೆ ಗಾನಿಯನ್ ಅಂತ್ಯ ಸಂಸ್ಕಾರ ಸಾಕಷ್ಟು ಪ್ರಚಾರ ಪಡೆದುಕೊಂಡಿತು. ಶವ ಸಂಸ್ಕಾರ ಪೂರ್ವದಲ್ಲಿ ಪೊಲ್ ಬೆರರ್ ಗಳು ಕಾಫಿನ್ ನೃತ್ಯ ಮಾಡಿ ಸ್ಮಶಾನಕ್ಕೆ ಕೊಂಡೊಯ್ಯುವ ವಿಧಾನ ಆಸಕ್ತಿಕರ. ಇದೀಗ ಆ ಬೇರರ್ ಗಳೇ ರಸ್ತೆಯಲ್ಲಿ ತಿರುಗುವವರಿಗೆ ಮನಸ್ಸಿಗೆ ಮುಟ್ಟುವಂತೆ ಎಚ್ಚರಿಕೆ ನೀಡಿದ್ದಾರೆ.

View this post on Instagram

? From NANA OTAFRIJA to all the Doctors & Medical Workers ? ? in the world ? Thankyou ?? Tag?? all the Doctors out there with your country flag. #COVIDー19 #CoffinMeme #benjaminaidoo #nanaotafrija #CoffinDance #Doctors #stayathomeordancewithus

A post shared by Benjamin Aidoo ? (@benjaminaidoo) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...