alex Certify ಕೊರೋನಾ ನಿವಾರಣೆಗೆ ಟ್ರಂಪ್ ಎಡಬಿಡಂಗಿ ಹೇಳಿಕೆ ನಂಬಿ ಅಪಾಯ ತಂದುಕೊಂಡ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ನಿವಾರಣೆಗೆ ಟ್ರಂಪ್ ಎಡಬಿಡಂಗಿ ಹೇಳಿಕೆ ನಂಬಿ ಅಪಾಯ ತಂದುಕೊಂಡ ಜನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೊನಾ ಸೋಂಕು ನಿವಾರಕ ಚುಚ್ಚುಮದ್ದು ನೀಡುವ ಕುರಿತು ನೀಡಿದ ಹೇಳಿಕೆ ಅವಾಂತರಕ್ಕೆ ಕಾರಣವಾಗಿದೆ.

ಕೊರೋನಾ ಸೋಂಕು ತಡೆಗೆ ಸೋಂಕು ನಿರೋಧಕವನ್ನು ಸೋಂಕಿತರಿಗೆ ಇಂಜೆಕ್ಷನ್ ರೂಪದಲ್ಲಿ ಕೊಡಬೇಕು. ಸೋಂಕು ನಿವಾರಕ ಚುಚ್ಚುಮದ್ದು ನೀಡುವುದರಿಂದ ಸೋಂಕು ಹತೋಟಿಗೆ ಬರುತ್ತದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ತಜ್ಞರು ಸ್ಪಷ್ಟನೆ ನೀಡಿದ್ದರು.

ಆದರೆ ಟ್ರಂಪ್ ಹೇಳಿಕೆಯನ್ನೇ ನಂಬಿದ ಅನೇಕರು ಮನೆಯಲ್ಲಿ ಸ್ವಚ್ಛತೆಗೆ ಬಳಸುವ ರಾಸಾಯನಿಕಗಳು, ಫಿನಾಯಿಲ್ ಮೊದಲಾದವುಗಳನ್ನು ಕುಡಿದಿದ್ದಾರೆ. ಕೋರೋನಾ ಸೋಂಕು ವಾಸಿಯಾಗುತ್ತದೆ ಎಂಬ ನಂಬಿಕೆಯಲ್ಲಿ ಟ್ರಂಪ್  ಹೇಳಿದ್ದನ್ನು ನಂಬಿದ ಜನ ಫಿನಾಯಿಲ್ ಕುಡಿದು ಆರೋಗ್ಯ ಹದಗೆಟ್ಟು ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದಾರೆ.

ನ್ಯೂಯಾರ್ಕ್ ನಗರದಲ್ಲಿ ಸುಮಾರು 100 ಕ್ಕೂ ಅಧಿಕ ಮಂದಿ ಗಾಬರಿಯಿಂದ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದಾರೆ. ಅನೇಕರು ಸೋಂಕು ನಿರೋಧಕಗಳನ್ನು ಸೇವಿಸಿ ಅಪಾಯ ತಂದುಕೊಂಡಿದ್ದಾರೆ. ನ್ಯೂಯಾರ್ಕ್ ಆರೋಗ್ಯ ಆಯುಕ್ತರು ಈ ಬಗ್ಗೆ ಸ್ಪಷ್ಟನೆ ನೀಡಿ, ರಾಸಾಯನಿಕಗಳನ್ನು ದೇಹದೊಳಗೆ ಉಸಿರಾಟದ ಮೂಲಕ, ಬಾಯಿ ಕಿವಿ ಮೂಲಕ ತೆಗೆದುಕೊಳ್ಳಬಾರದು, ಅದು ಹಾನಿಕಾರಕ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...