alex Certify ಥಾರ್‌ ಮರುಭೂಮಿಯಲ್ಲಿ ಜಗತ್ತಿನ ಅತಿ ದೊಡ್ಡ ಭೂಬರಹ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಾರ್‌ ಮರುಭೂಮಿಯಲ್ಲಿ ಜಗತ್ತಿನ ಅತಿ ದೊಡ್ಡ ಭೂಬರಹ ಪತ್ತೆ…!

ಜಗತ್ತಿನಲ್ಲೇ ಅತಿ ದೊಡ್ಡ ಭೂಬರಹ ಎನ್ನಲಾದ ರಚನೆಯೊಂದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ನೆಲದ ಮೇಲೆ ಮಾನವನ ಕೈಗಳಿಂದ ರಚಿತವಾದ ಚಿತ್ರಗಳು ಅಥವಾ ಲಿಪಿಗಳನ್ನು ಭೂಬರಹಗಳು ಎನ್ನಬಹುದಾಗಿದೆ.

ಥಾರ್‌ ಮರುಭೂಮಿಯಲ್ಲಿ ಪತ್ತೆ ಮಾಡಲಾದ ನಿಗೂಢ ಭೂಚಿತ್ರವೊಂದು 1,00,000 ಚದರ ಮೀಟರ್‌ ವಿಸ್ತಾರವಿದೆ. ಈ ರಚನೆಯು ಪೆರುವಿನ ನಜ್ಕಾ ಮರುಭೂಮಿಯಲ್ಲಿರುವ ಭೂಬರಹಕ್ಕಿಂತ ಬಹಳ ದೊಡ್ಡದಾಗಿದೆ.

ಈ ಭಾರೀ ರಚನೆಗಳನ್ನು ಫ್ರಾನ್ಸ್‌ನ ಲಾರಿಕ್‌ನಲ್ಲಿ ನೆಲೆಸಿರುವ ಕಾರ್ಲೋ ಹಾಗೂ ಅವರ ಪುತ್ರ ಯೋಹಾನ್ ಒಟ್‌ಹೈಮರ್‌‌ ಶೋಧಿಸಿದ್ದಾರೆ. ಗೂಗಲ್ ಅರ್ತ್‌ ಸಹಾಯದಿಂದ ಈ ಭೂಚಿತ್ರಗಳ ಎಂಟು ನಿವೇಶನಗಳನ್ನು ಪತ್ತೆ ಮಾಡಿರುವ ಕಾರ್ಲೊ, ಸಂಭವನೀಯ ನಿವೇಶನಗಳ ಮೇಲೆ ಡ್ರೋನ್ ಹಾರಿಸಿ ಸ್ಥಳಾಧ್ಯಾಯನ ಮಾಡಿದ್ದಾರೆ.

ಬೋಹಾ ಎಂಬ ಊರಿನಲ್ಲಿ ಕಂಡು ಬಂದ ಈ ಭೂಚಿತ್ರಗುಚ್ಛವು ಒಟ್ಟಾರೆ 30 ಮೈಲಿಯಷ್ಟು ಉದ್ದವಿದೆ. ಇವುಗಳ ಪೈಕಿ ಅತಿ ದೊಡ್ಡ ಭೂಚಿತ್ರವೆಂದರೆ ಬೋಹಾ. ಇದೊಂದೇ 7.5 ಮೈಲಿ ಉದ್ದವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...