ಜಗತ್ತಿನಲ್ಲೇ ಅತಿ ದೊಡ್ಡ ಭೂಬರಹ ಎನ್ನಲಾದ ರಚನೆಯೊಂದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ನೆಲದ ಮೇಲೆ ಮಾನವನ ಕೈಗಳಿಂದ ರಚಿತವಾದ ಚಿತ್ರಗಳು ಅಥವಾ ಲಿಪಿಗಳನ್ನು ಭೂಬರಹಗಳು ಎನ್ನಬಹುದಾಗಿದೆ.
ಥಾರ್ ಮರುಭೂಮಿಯಲ್ಲಿ ಪತ್ತೆ ಮಾಡಲಾದ ನಿಗೂಢ ಭೂಚಿತ್ರವೊಂದು 1,00,000 ಚದರ ಮೀಟರ್ ವಿಸ್ತಾರವಿದೆ. ಈ ರಚನೆಯು ಪೆರುವಿನ ನಜ್ಕಾ ಮರುಭೂಮಿಯಲ್ಲಿರುವ ಭೂಬರಹಕ್ಕಿಂತ ಬಹಳ ದೊಡ್ಡದಾಗಿದೆ.
ಈ ಭಾರೀ ರಚನೆಗಳನ್ನು ಫ್ರಾನ್ಸ್‌ನ ಲಾರಿಕ್‌ನಲ್ಲಿ ನೆಲೆಸಿರುವ ಕಾರ್ಲೋ ಹಾಗೂ ಅವರ ಪುತ್ರ ಯೋಹಾನ್ ಒಟ್‌ಹೈಮರ್ ಶೋಧಿಸಿದ್ದಾರೆ. ಗೂಗಲ್ ಅರ್ತ್ ಸಹಾಯದಿಂದ ಈ ಭೂಚಿತ್ರಗಳ ಎಂಟು ನಿವೇಶನಗಳನ್ನು ಪತ್ತೆ ಮಾಡಿರುವ ಕಾರ್ಲೊ, ಸಂಭವನೀಯ ನಿವೇಶನಗಳ ಮೇಲೆ ಡ್ರೋನ್ ಹಾರಿಸಿ ಸ್ಥಳಾಧ್ಯಾಯನ ಮಾಡಿದ್ದಾರೆ.
ಬೋಹಾ ಎಂಬ ಊರಿನಲ್ಲಿ ಕಂಡು ಬಂದ ಈ ಭೂಚಿತ್ರಗುಚ್ಛವು ಒಟ್ಟಾರೆ 30 ಮೈಲಿಯಷ್ಟು ಉದ್ದವಿದೆ. ಇವುಗಳ ಪೈಕಿ ಅತಿ ದೊಡ್ಡ ಭೂಚಿತ್ರವೆಂದರೆ ಬೋಹಾ. ಇದೊಂದೇ 7.5 ಮೈಲಿ ಉದ್ದವಿದೆ.