ಕೋವಿಡ್-19 ಲಾಕ್‌ಡೌನ್ ಟೈಮಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್‌ಗಳನ್ನು ಬೋರ್ ಆಗದಂತೆ ಹಮ್ಮಿಕೊಳ್ಳಲು ಮುಂದಾಗಿರುವ ಜಾರ್ಜ್ ಮನೋಲೋ ವಿಲ್ಲರ‍್ರೊಲ್ ಹೆಸರಿನ ಶಿಕ್ಷಕರೊಬ್ಬರು ಪ್ರತಿನಿತ್ಯ ಒಂದೊಂದು ಸೂಪರ್ ಹೀರೋ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪುಟ್ಟ ಹುಡುಗರ ಮೆಚ್ಚಿನ ಹೀರೋಗಳಾದ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್‌ಮನ್‌ಗಳ ಪೋಷಾಕಿನಲ್ಲಿ ಕಾಣಿಸಿಕೊಳ್ಳುವ ಇವರ ಕ್ಲಾಸ್ ಗಳು ಅದೆಷ್ಟು ಹಿಟ್ ಆಗಿವೆ ಎಂದರೆ, ಇವರ ಕ್ಲಾಸ್‌ಗಳನ್ನು ಅಟೆಂಡ್ ಮಾಡಲು ಮಕ್ಕಳು ಲ್ಯಾಪ್ಟಾಪ್ ಸ್ಕ್ರೀನ್‌ಗೆ ಕಚ್ಚಾಡುವಂತಾಗಿದೆ.
“ಸಾಂಪ್ರದಾಯಿಕ ಮಾಡೆಲ್ ಗಳಲ್ಲಿ ಶಿಕ್ಷಣವು ನಿಂತ ನೀರಿನಂತಾಗಿದೆ. ಈ ಸಾಂಕ್ರಮಿಕದ ಬಳಿಕ ಎಲ್ಲವೂ ಬದಲಾಗಲಿದ್ದು, ಇದರಿಂದ ಶಿಕ್ಷಣ ಕ್ಷೇತ್ರವೂ ಹೊರತಾಗಿರದು” ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಮಕ್ಕಳನ್ನು ಹ್ಯಾಂಡಲ್ ಮಾಡುವ ಸ್ಮಾರ್ಟ್ ತಂತ್ರಗಳ ಅಗತ್ಯ ಎಷ್ಟಿದೆ ಎಂದು ಮನದಟ್ಟು ಮಾಡುತ್ತಾರೆ ಈ ಶಿಕ್ಷಕ.