
ಅದಾಗ ತಾನೇ ಹಾಸಿಗೆಯಿಂದ ಎದ್ದ ಜೋಡಿಯೊಂದು ತಮ್ಮ ಮನೆಯಂಗಳದಲ್ಲಿ ಈಜುಕೊಳದಲ್ಲಿ ಮೊಸಳೆಯೊಂದನ್ನು ಕಂಡು ಹೌಹಾರಿದ್ದಾರೆ.
ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ
ದಕ್ಷಿಣ ಆಫ್ರಿಕಾದ ನಾರ್ತ ವೆಸ್ಟ್ ಪ್ರಾಂತ್ಯದ ಮೋಡ್ವಿಲ್ ನಿವಾಸಿಗಳಾದ ಜೇಕಬ್ ಬ್ರೆಟೆನ್‌ಬಾಕ್ ಹಾಗೂ ಆತನ ಮಡದಿ ಏಂಜೆಲ್, 10 ಅಡಿ ಉದ್ದದ ಮೊಸಳೆಯೊಂದು ತಮ್ಮ ಮನೆಯ ಕೊಳದಲ್ಲಿ ಈಜುತ್ತಿರುವುದನ್ನು ಭದ್ರತಾ ಕ್ಯಾಮೆರಾಗಳಲ್ಲಿ ಕಂಡಿದ್ದಾರೆ.
ಕೂಡಲೇ ವನ್ಯ ತಜ್ಞರನ್ನು ಸ್ಥಳಕ್ಕೆ ಕರೆಯಿಸಿದ ಜೋಡಿ, ಮೊಸಳೆಯನ್ನು ತಮ್ಮ ಈಜು ಕೊಳದಿಂದ ತೆರವುಗೊಳಿಸಲು ಕೋರಿಕೊಂಡಿದ್ದಾರೆ. ಜೇಕಬ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮೊಸಳೆಯನ್ನು ಈಜುಕೊಳದಿಂದ ರಕ್ಷಿಸಲು ಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.