alex Certify ಫುಡ್​ ಡೆಲಿವರಿ ಮಾಡುವ ಬದಲು ಕ್ಷಮಾಪಣಾ ಸಂದೇಶ ಕಳುಹಿಸಿದ ಡೆಲಿವರಿ ಬಾಯ್​..! ಕಾರಣವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಡ್​ ಡೆಲಿವರಿ ಮಾಡುವ ಬದಲು ಕ್ಷಮಾಪಣಾ ಸಂದೇಶ ಕಳುಹಿಸಿದ ಡೆಲಿವರಿ ಬಾಯ್​..! ಕಾರಣವೇನು ಗೊತ್ತಾ….?

ಆನ್​​ಲೈನ್​ನಲ್ಲಿ ಫುಡ್​ನ್ನು ಬುಕ್​ ಮಾಡಿ ಅದು ಯಾವಾಗ ಬರುತ್ತೆ ಅಂತಾ ಕಾಯೋದೇ ಒಂದು ಮಜಾ. ಆದರೆ ನೀವು ಆರ್ಡರ್​ ಮಾಡಿದ ತಿಂಡಿಯನ್ನ ಯಾರೋ ಮಾರ್ಗ ಮಧ್ಯದಲ್ಲೇ ತಿಂದಿದ್ದಾರೆ ಅಂತಾ ಗೊತ್ತಾದ್ರೆ ಏನು ಅನಿಸಬೋದು ನಿಮಗೆ..?

ಇಂತಹದ್ದೇ ಒಂದು ಘಟನೆಗೆ 21 ವರ್ಷದ ಯುವತಿ ಇಲ್ಲಿ ಇಲಿಯಾಸ್​​​ ಸಾಕ್ಷಿಯಾಗಿದ್ದಾರೆ. ಆನ್​ಲೈನ್​ ಅಪ್ಲಿಕೇಶನ್​ ಮೂಲಕ ತಿಂಡಿ ಆರ್ಡರ್​ ಮಾಡಿದ್ದ ಯುವತಿಗೆ ನಿಮ್ಮ ಆಹಾರವನ್ನ ನಾನೇ ತಿಂದೆ ಎಂಬ ಸಂದೇಶ ದೊರೆತಿದೆ.

ಕ್ಷಮಿಸಿ , ನಿಮ್ಮ ತಿಂಡಿಯನ್ನ ನಾನೇ ತಿಂದೆ ಎಂದು ಡೆಲಿವರಿ ಬಾಯ್​ ಸಂದೇಶ ತಲುಪಿಸಿದ್ದಾನೆ.
ಇಲ್ಯಾಸ್​, ಸರಿ ಸುಮಾರು 1456.47 ರೂಪಾಯಿ ಮೌಲ್ಯಕ್ಕೆ 2 ಬರ್ಗರ್​, ಚಿಪ್ಸ್ ಹಾಗೂ ಚಿಕನ್​ ತಿನಿಸನ್ನ ಬುಕ್​ ಮಾಡಿದ್ದರು. ಉಬರ್​ ಈಟ್ಸ್ ಅಪ್ಲಿಕೇಶನ್​ ಮೂಲಕ ಯುವತಿ ಈ ಆಹಾರವನ್ನ ಬುಕ್​ ಮಾಡಿದ್ದಳು ಎನ್ನಲಾಗಿದೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ನನಗೆ ಆಹಾರ ಬಂದು ತಲುಪುತ್ತದೆ ಎಂದು ಕಾದಿದ್ದ ಯುವತಿಗೆ ಅಪ್ಲಿಕೇಶನ್​​ನಲ್ಲೂ ಡೆಲಿವರಿ ಬಾಯ್​ ನಿಮ್ಮ ಹತ್ತಿರಕ್ಕೆ ಬರುತ್ತಿದ್ದಾನೆ ಎಂಬ ಸಂದೇಶ ಕಾಣುತ್ತಾ ಇತ್ತು. ಹೀಗಾಗಿ ಇನ್ನೇನು ಕೆಲವೇ ನಿಮಿಷಗಳಲ್ಲಿ ಮನೆಯ ಬೆಲ್​ ರಿಂಗಣಿಸುತ್ತದೆ ಎಂದು ಇಲ್ಯಾಸ್​ ಎಂದುಕೊಂಡಿದ್ದಳು. ಆದರೆ ಆ ಪ್ರಾಮಾಣಿಕ ಡೆಲಿವರಿ ಬಾಯ್​ ಮಾತ್ರ ಫುಡ್​ ಕೊಡೋದನ್ನ ಬಿಟ್ಟು ನಿಮ್ಮ ಆರ್ಡರ್​​ನ್ನು ನಾನೇ ತಿಂದೆ ಎಂದು ಮೆಸೇಜ್​ ಮಾಡಿದ್ದಾನೆ.

ಆದರೆ ಈ ವಿಚಾರ ತಿಳಿದ ಬಳಿಕ ಊಬರ್ ಈಟ್ಸ್ ಸಂಸ್ಥೆ ಈಕೆಗೆ ಉಚಿತವಾಗಿ ಫುಡ್​ ಡೆಲಿವರಿ ಮಾಡಿದೆ. ಆದರೆ ಆಕೆ ಡೆಲಿವರಿ ಡ್ರೈವರ್​ ವಿರುದ್ಧ ದೂರನ್ನ ನೀಡಲು ನಿರಾಕರಿಸಿದ್ದಾರೆ. ಬಹುಶಃ ಆತನಿಗೆ ಸಿಕ್ಕಾಪಟ್ಟೆ ಹಸಿವಾಗಿದ್ದಿರಬಹುದು. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಯಾರದ್ದೋ ಉದ್ಯೋಗ ಹೋಗಲು ಕಾರಣೀಕರ್ತಳಾಗಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...