alex Certify BIG NEWS: ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಶಾಕ್‌ – ಏರಿಕೆಯಾಗ್ತಿದೆ ಧೂಮಪಾನಿಗಳ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಶಾಕ್‌ – ಏರಿಕೆಯಾಗ್ತಿದೆ ಧೂಮಪಾನಿಗಳ ಸಂಖ್ಯೆ

ಇಡೀ ವಿಶ್ವವು ಕೊರೊನಾ ವಿರುದ್ಧ ಹೋರಾಟವನ್ನ ನಡೆಸುತ್ತಿರುವಾಗಲೇ ಸದ್ದಿಲ್ಲದೇ ಇನ್ನೊಂದು ಅಪಾಯವೊಂದು ಕಂಟಕಪ್ರಾಯವಾಗುತ್ತಿದೆ. ಹೊಸ ಅಧ್ಯಯನವೊಂದರ ಪ್ರಕಾರ 2019ರಲ್ಲಿ ಬರೋಬ್ಬರಿ 8 ಮಿಲಿಯನ್​ ಮಂದಿ ಧೂಮಪಾನದ ಚಟದಿಂದಾಗಿಯೇ ಅಸುನೀಗಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಈ ಸಂಖ್ಯೆಯು ಇನ್ನಷ್ಟು ಹೆಚ್ಚಾಗಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ ಧೂಮಪಾನಿಗಳ ಸಂಖ್ಯೆ 150 ಮಿಲಿಯನ್​ಗೆ ಏರಿಕೆ ಕಂಡಿದೆ. ಅದರಲ್ಲೂ ಹದಿಹರೆಯದವರೇ ಹೆಚ್ಚಾಗಿ ಧೂಮಪಾನಿಗಳಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

ಅಲ್ಲದೇ ಈ ಅಧ್ಯಯನ ನೀಡಿರುವ ಮಾಹಿತಿಯ ಪ್ರಕಾರ 25 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಅನೇಕರು ಧೂಮಪಾನಿಗಳಾಗುತ್ತಿದ್ದಾರೆ.

ಧೂಮಪಾನವೆಂಬ ದುಶ್ಚಟಕ್ಕೆ ಹೆಚ್ಚಾಗಿ ಯುವಜನರೇ ಗುರಿಯಾಗುತ್ತಿದ್ದಾರೆ. ಪ್ರತಿಯೊಂದು ದೇಶವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ವರ್ಷಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಧ್ಯಯನದ ಮುಖ್ಯ ಲೇಖಕಿ ಮರಿಸ್ಸಾ ರಿಟ್ಸ್​ಮಾ ಹೇಳಿದ್ದಾರೆ.

ವಿಶ್ವದ 20 ರಾಷ್ಟ್ರಗಳಲ್ಲಿ ಪುರುಷ ಧೂಮಪಾನಿ ಹಾಗೂ 12 ರಾಷ್ಟ್ರಗಳಲ್ಲಿ ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಚೀನಾ ಅತೀ ಹೆಚ್ಚು ಧೂಮಪಾನಿಗಳನ್ನ ಹೊಂದಿರುವ ರಾಷ್ಟ್ರವಾಗಿದೆ. ಇದಾದ ಬಳಿಕ ಭಾರತ, ಇಂಡೋನೇಷಿಯಾ, ರಷ್ಯಾ , ಅಮೆರಿಕ, ಬಾಂಗ್ಲಾದೇಶ, ಜಪಾನ್​, ಟರ್ಕಿ, ವಿಯೆಟ್ನಾಂ ಹಾಗೂ ಫಿಲಿಫೈನ್ಸ್​ ಮುಂದಿನ ಸ್ಥಾನಗಳನ್ನ ಹಂಚಿಕೊಂಡಿವೆ.

ಸರ್ಕಾರಗಳು ಶೀಘ್ರದಲ್ಲೇ ಧೂಮಪಾನ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಪರಿಣಾಮಕಾರಿ ದಾರಿಯನ್ನ ಹುಡುಕಬೇಕಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. 30 ವರ್ಷದ ಒಳಗೆ ಧೂಮಪಾನ ಚಟ ಕಲಿಯದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಚಟಕ್ಕೆ ಗುರಿಯಾಗೋ ಸಾಧ್ಯತೆ ತುಂಬಾನೇ ಕಡಿಮೆ ಎಂದು ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...