alex Certify 12000 ಅಡಿ ಆಳದಲ್ಲಿ ಬಿದ್ದರೂ ಹಾಳಾಗದ ಐ ಫೋನ್​..! ವಿಡಿಯೋ ವೈರಲ್​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12000 ಅಡಿ ಆಳದಲ್ಲಿ ಬಿದ್ದರೂ ಹಾಳಾಗದ ಐ ಫೋನ್​..! ವಿಡಿಯೋ ವೈರಲ್​​​

ನಿಮ್ಮ ಕೈಲಿದ್ದ ಮೊಬೈಲ್​ ಫೋನ್​ ಆಯತಪ್ಪಿ ಕೆಳಗೆ ಬಿತ್ತು ಅಂದರೆ ಒಮ್ಮೆ ಜೀವವೇ ಹೋದಂತಾಗುತ್ತೆ. ಆಯತಪ್ಪಿ ಫೋನ್​ ನೆಲಕ್ಕೆ ಉರುಳಿತು ಅಂದರೆ ಒಂದೋ ಮೊಬೈಲ್​ ಸ್ಕ್ರೀನ್​ ಹಾಳಾಗುತ್ತೆ ಇಲ್ಲವೇ ಹೊಸ ಮೊಬೈಲ್​​ನ್ನೇ ಖರೀದಿ ಮಾಡಬೇಕಾದ ಪ್ರಸಂಗ ಎದುರಾಗಿ ಬಿಡುತ್ತೆ.

ಐಫೋನ್​​ ಬರೋಬ್ಬರಿ 12,000 ಅಡಿ ಆಳಕ್ಕೆ ಬಿದ್ದ ಬಳಿಕವೂ ಸುರಕ್ಷಿತವಾಗಿದೆ ಎಂದು ನಾವು ಹೇಳಿದ್ದರೆ ನಂಬೋಕೆ ನೀವು ತಯಾರಿದ್ದೀರಾ..? ಅರಿಝೋನಾ ಮರುಭೂಮಿಯಲ್ಲಿ ಸ್ಕೈ ಡೈವಿಂಗ್​ ಮಾಡುತ್ತಿದ್ದ ವ್ಯಕ್ತಿಯ ಮೊಬೈಲ್​ ಆಕಾಶದಿಂದ ಭೂಮಿಗೆ ಬಿದ್ದರೂ ಸಹ ಅದು ಸರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಅಚ್ಚರಿಕೆ ಕಾರಣವಾಗಿದೆ.

31 ವರ್ಷದ ಕೋಡಿ ಮಾಡ್ರೋಗೆ ಸೇರಿದ ಮೊಬೈಲ್​ ಇದಾಗಿದೆ. ಬಳಿಕ ಈ ಮೊಬೈಲ್​ ಮರುಭೂಮಿಯಲ್ಲಿ ಸಿಕ್ಕಿದೆ. ಅದರ ಸ್ಕ್ರೀನ್​ ಒಡೆದಿದ್ದರೂ ಸಹ ಅದು ಕಾರ್ಯನಿರ್ವಹಿಸ್ತಾ ಇರೋದನ್ನ ನೋಡಿ ಮಾಡ್ರೋ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ನಡೆದ ಘಟನೆ ಇದಾಗಿದ್ದು ವಿಡಿಯೋ ಇದೀಗ ವೈರಲ್​ ಆಗಿದೆ.

 

View this post on Instagram

A post shared by @kodymadro

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...