alex Certify ಎಚ್ಚರ….! ಟಾಯ್ಲೆಟ್‌ ಫ್ಲಷ್‌ ನಿಂದಲೂ ಬರಬಹುದು ಕೊರೊನಾ…!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ….! ಟಾಯ್ಲೆಟ್‌ ಫ್ಲಷ್‌ ನಿಂದಲೂ ಬರಬಹುದು ಕೊರೊನಾ…!!

Shut the Lid: Flushing Toilet Can Spread Coronavirus Faster in Air ...

ವಿಶ್ವವ್ಯಾಪಿ ಹಬ್ಬಿರುವ ಕೊರೋನಾ ಯಾವ ರೀತಿ ಬರುತ್ತದೆ ಎನ್ನುವ ವಿಚಾರದಲ್ಲಿಯೇ ಅನೇಕ ಗೊಂದಲಗಳಿವೆ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್‌ ಫ್ಲಶ್ ನಿಂದಲೂ ಕೊರೋನಾ ಬರುತ್ತದೆ ಎನ್ನಲಾಗಿದೆ.

ಹೌದು, ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ಮೊದಲು ಫ್ಲಶ್ ಮಾಡುವುದಾದರೆ ಕಮೋಡ್‌ ಮೇಲಿರುವ ಮುಚ್ಚಳವನ್ನು ಮುಚ್ಚಿ ಮಾಡಬೇಕಂತೆ. ಇಲ್ಲದಿದ್ದರೆ ಅದರಿಂದಲೂ ಕೊರೋನಾ ಹಬ್ಬುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಚೀನಾದ ಯಂಗ್‌ಝೂ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಶೌಚಾಲಯಗಳನ್ನು ಹೆಚ್ಚು ಬಳಸುವುದರಿಂದ ವೆಲ್ಯಾಸಿಟಿ ಹೆಚ್ಚಾಗಿ ಈ ರೀತಿ ಸೋಂಕು ಹಬ್ಬುವ ಸಾಧ್ಯತೆಯಿದೆ.

ಪ್ರಮುಖವಾಗಿ ಅತಿಹೆಚ್ಚು ಜನರಿರುವ ಮನೆಯಲ್ಲಿ ಹಾಗೂ ಸಾರ್ವಜನಿಕ ಶೌಚಾಲಯದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವ ಮಾತುಗಳನ್ನು ಹೇಳಲಾಗಿದೆ. ಆದ್ದರಿಂದ ಈ ಸೋಂಕು ಹರಡುವುದನ್ನು ತಪ್ಪಿಸಲು, ಫ್ಲಶ್ ಆನ್‌ ಮಾಡುವ ಮೊದಲು ಮುಚ್ಚಳವನ್ನು ಹಾಕಿ ನಂತರ ನೀರು ಬಿಡುವಂತೆ ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...