alex Certify ‌ʼಮಾಸ್ಕ್ʼ ಆಗಿ ಬಳಕೆಯಾಯ್ತು ಸ್ಯಾನಿಟರಿ ಪ್ಯಾಡ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮಾಸ್ಕ್ʼ ಆಗಿ ಬಳಕೆಯಾಯ್ತು ಸ್ಯಾನಿಟರಿ ಪ್ಯಾಡ್….!

ಮ್ಯಾಂಚೆಸ್ಟರ್‌: ತನ್ನ ಸ್ನೇಹಿತೆಯ ಜತೆ ಅಂಗಡಿಗೆ ತೆರಳುವಾಗ ಮಹಿಳೆಯೊಬ್ಬಳು ಮುಖಕ್ಕೆ ಸ್ಯಾನಿಟರಿ ಪ್ಯಾಡ್ ಹಾಕಿಕೊಂಡು ಬಂದು ಸುದ್ದಿಯಾಗಿದ್ದಾಳೆ.

ಯುನೈಟೆಡ್ ಕಿಂಗ್ಡಮ್ ನ ಗ್ರೇಟ್ ಮ್ಯಾಂಚೆಸ್ಟರ್‌ ನ ಅಥೆರ್ಟನ್ ನ 30 ವರ್ಷದ ಮಹಿಳೆ ರಾಚೆಲ್ ಟೇಲರ್, ಸ್ನೇಹಿತೆ ಎಲೆಜೆಬೆತ್ ಪರ್ ಜತೆ ಪೌಂಡ್ ಲ್ಯಾಂಡ್ ಅಂಗಡಿಗೆ ಬರುವಾಗ ಈ ರೀತಿ ಮಾಡಿದ್ದಳು.

“ಫೇಸ್ ಮಾಸ್ಕ್ ಮರೆತು ಬಂದಿದ್ದೆ. ಕಾರಿನಲ್ಲಿ ಹುಡುಕಾಡಿದಾಗ ಮಾಸ್ಕ್ ಬದಲು ಒಂದು ಸ್ಯಾನಿಟರಿ ಪ್ಯಾಡ್ ಸಿಕ್ಕಿತ್ತು. ಹಾಗೇ ಹೋದರೆ ದಂಡ ಬೀಳುತ್ತದೆ. ಇದರಿಂದ ಪ್ಯಾಡನ್ನೇ ಮಾಸ್ಕ್ ಮಾಡಿ ಬಳಸಿದೆ. ಮೇಲಿಂದ ಒಂದು ಕನ್ನಡಕ ಹಾಕಿದೆ. ನಾವು ಬದಲಾವಣೆ ತರಬೇಕು” ಎಂದು ಟೇಲರ್ ನಗೆಯಾಡುತ್ತ ಹೇಳಿದ್ದಾರೆ.

“ಆಕೆ ಏನು ಬೇಕಾದರೂ‌ ಮಾಡುತ್ತಾಳೆ. ಸ್ಟೋರ್‌ನ ಜನರೆಲ್ಲ ಆಕೆಯನ್ನೇ ನೋಡುತ್ತಿದ್ದರು‌. ನಾನು ಆಕೆಯ ಜತೆ ಹೊಗುತ್ತಿದ್ದೆ.‌ ಒಂದು ಸಮಸ್ಯೆ ಎಂದರೆ ಪೇಮೆಂಟ್ ಆಪ್ ಆಕೆಯ ಮುಖ ಗುರುತಿಸಲಿಲ್ಲ” ಎಂದು ಆಕೆಯ ಸ್ನೇಹಿತೆ ಎಲೆಜೆಬೆತ್ ಜೋಕ್ ಮಾಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...