alex Certify ಶಾಕಿಂಗ್ ನ್ಯೂಸ್: ಸೋಂಕು ಹರಡಲೆಂದೇ ನಡೆಸಲಾಗ್ತಿದೆ ಕೋವಿಡ್ ಪಾರ್ಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಸೋಂಕು ಹರಡಲೆಂದೇ ನಡೆಸಲಾಗ್ತಿದೆ ಕೋವಿಡ್ ಪಾರ್ಟಿ…!

ವಿಶ್ವಾದ್ಯಂತ ಕರೊನಾ ಸಾವಿರಾರು ಜನರನ್ನು ಬಲಿ ಪಡೆದಿದೆ. ಇದೇ ವೇಳೆ ಕರೊನಾ ಹಿಮ್ಮೆಟ್ಟಿಸಲು ಎಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದೆ. ಆದರೆ ಇದನ್ನು ವಿರೋಧಿಸಿ ಕೆಲವು ಕಿಡಿಗೇಡಿಗಳು ಕೋವಿಡ್ 19 ಪಾರ್ಟಿಗಳನ್ನು ಆಯೋಜಿಸುತ್ತಿರುವ ಆಘಾತಕಾರಿ ಸುದ್ದಿಯೊಂದು ಬಂದಿದೆ.

ಅಮೆರಿಕಾ, ಯೂರೋಪ್ ನ ವಿವಿಧ ಕಡೆ ಈ ರೀತಿಯ ಬೆಳವಣಿಗೆ ನಡೆದಿದ್ದು, ಫ್ಲೋರಿಡಾದ ಪೊಲೀಸರು ಅಲ್ಲಿನ ಜನಪ್ರಿಯ ಕಡಲ ತೀರಗಳನ್ನು ಸಾರ್ವಜನಿಕರ ಪ್ರವೇಶದಿಂದ ಮುಕ್ತಗೊಳಿಸಿದ ಬಳಿಕ ಇಂಥ ಪಾರ್ಟಿ ನಡೆದಿವೆ ಎನ್ನಲಾಗಿದೆ.

ಲಾಕ್ ಡೌನ್ ಇರುವುದರಿಂದ ಒಬ್ಬೊಬ್ಬರಾಗಿ ನಡೆದುಕೊಂಡು ನಿರ್ದಿಷ್ಟ ಖಾಸಗಿ‌ ಮನೆಗಳಲ್ಲಿ ಸೇರಿಕೊಳ್ಳುವ ಯುವಕರು ಪಾರ್ಟಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಸ್ ರೆಬಲ್ಸ್ ಎಂದು ಗ್ರೂಪ್ ಮಾಡಿಕೊಂಡು ಚಟುವಟಿಕೆ ನಡೆಸುತ್ತಿದ್ದಾರೆ.

ಅಮೆರಿಕಾದಲ್ಲಿ ಅಪಾಯಕಾರಿ ಬೆಳವಣಿಗೆ ನಡೆದಿದ್ದು, ಲಾಕ್ ಡೌನ್ ವಿರೋಧಿ ಹೋರಾಟಕ್ಕಿಂತ ಉದ್ದೇಶಪೂರ್ವಕವಾಗಿ ವೈರಸ್ ಹರಡಲು ಕೋವಿಡ್ 19 ಪಾರ್ಟಿ ನಡೆಸುತ್ತಿರುವುದು ಅಲ್ಲಿನ ಸರ್ಕಾರಕ್ಕೆ ಆತಂಕ ತಂದೊಡ್ಡಿದೆ. ಒಂದು ವಾರದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಕೋವಿಡ್ 19 ಪಾರ್ಟಿ ಮಾಡಿದ್ದರ ಸಂಬಂಧ ಬರೋಬ್ಬರಿ ನೂರು ಪ್ರಕರಣ ದಾಖಲಾಗಿದ್ದು, ಸೋಂಕಿತರಲ್ಲದವರನ್ನು ಸೋಂಕಿತರ ಜತೆ ಬೆರೆಯುವಂತೆ ಮಾಡುವ ಉದ್ದೇಶ ಈ ಪಾರ್ಟಿಗಳ ಹಿಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...