alex Certify ಈ ದೇಶದಲ್ಲಿ ಮೂಗಿನಿಂದಲ್ಲ……ಗುದದ್ವಾರದ ಮೂಲಕ ಮಾಡಲಾಗುತ್ತೆ ಕೊರೊನಾ ಟೆಸ್ಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿ ಮೂಗಿನಿಂದಲ್ಲ……ಗುದದ್ವಾರದ ಮೂಲಕ ಮಾಡಲಾಗುತ್ತೆ ಕೊರೊನಾ ಟೆಸ್ಟ್​..!

ಕೊರೊನಾ ಟೆಸ್ಟ್ ಅಂದಕೂಡಲೇ ನಿಮ್ಮ ತಲೆಗೆ ಏನು ಬರುತ್ತೆ…? ಮೂಗಿಗೆ ಹಾಗೂ ಗಂಟಲಿನಿಂದ ದ್ರವವನ್ನ ತೆಗೆದು ಅದನ್ನ ಪರೀಕ್ಷೆಗೆ ಕಳುಹಿಸಲಾಗುತ್ತೆ ಅನ್ನೋದು.

ಆದರೆ ಚೀನಾ ಮಾತ್ರ ಈ ಟೆಸ್ಟ್​ಗಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು ಇಲ್ಲಿ ಗುದದ್ವಾರದ ಮೂಲಕ ಕೊರೊನಾ ಪರೀಕ್ಷೆ ಮಾಡಲಾಗ್ತಿದೆ.

ಕೊರೊನಾದಿಂದ ಅತಿ ಅಪಾಯದಲ್ಲಿ ಇರುವವರಿಗೆ ಈ ಪರೀಕ್ಷೆಯನ್ನ ಕೈಗೊಳ್ಳಲಾಗುತ್ತೆ. ಅಲ್ಲದೇ ಗಂಟಲು ದ್ರವ ಮಾದರಿ ಸಂಗ್ರಹಕ್ಕಿಂತ ಗುದದ್ವಾರದ ವಿಧಾನದಿಂದ ಹೆಚ್ಚು ನಿಖರ ಫಲಿತಾಂಶ ಸಿಗುತ್ತೆ ಎಂದು ಚೀನಾ ವೈದ್ಯರು ಹೇಳಿದ್ದಾರೆ.

ಕ್ರೆಡಿಟ್ ಕಾರ್ಡ್ ಮೂಲಕ ಪತಿ ಗರ್ಲ್‌ ಫ್ರೆಂಡ್‌ ಗುಟ್ಟು ರಟ್ಟು

ಚೀನಾದ ರಾಜಧಾನಿ ಬೀಜಿಂಗ್​​ನಲ್ಲಿ ಕಳೆದ ವಾರ 9 ವರ್ಷದ ಬಾಲಕ ಕೊರೊನಾ ಸೋಂಕಿಗೆ ಒಳಗಾದ ಬಳಿಕ ಸಾಮೂಹಿಕವಾಗಿ ಗುದದ್ವಾದರ ಕೊರೊನಾ ಪರೀಕ್ಷೆ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜನವರಿ 17ರಿಂದ 3 ಮಿಲಿಯನ್​ಗೂ ಹೆಚ್ಚು ನಿವಾಸಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.

ಅಂದಹಾಗೆ ಚೀನಾ ಕಳೆದ ವರ್ಷವೇ ಈ ಗುದದ್ವಾರ ಕೊರೊನಾ ಪರೀಕ್ಷೆಯನ್ನ ನಡೆಸಿತ್ತು. ಆದರೆ ಈ ವಿಧಾನವನ್ನ ಮುಖ್ಯವಾಗಿ ಕ್ವಾರಂಟೈನ್​ನಲ್ಲಿ ಇರುವವರಿಗೆ ಮಾತ್ರ ನಡೆಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...