alex Certify 15 ವರ್ಷದ ಬಳಿಕ ಸಿಕ್ತು ಕಳೆದುಹೋಗಿದ್ದ ಬೆಕ್ಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ವರ್ಷದ ಬಳಿಕ ಸಿಕ್ತು ಕಳೆದುಹೋಗಿದ್ದ ಬೆಕ್ಕು….!

ಲಾಸ್ ಎಂಜಲೀಸ್: ಕಳೆದು ಹೋದ ಬೆಕ್ಕೊಂದು ಬರೋಬ್ಬರಿ 15 ವರ್ಷಗಳ ನಂತರ ಸಿಕ್ಕ ಅಪರೂಪದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನ ಕೌಂಟಿ ಎಂಬಲ್ಲಿ ನಡೆದಿದೆ.

ಚಾರ್ಲ್ಸ್ ಎಂಬ ವ್ಯಕ್ತಿ ಸಾಕಿದ್ದ ಬ್ರ್ಯಾಂಡಿ ಎಂಬ ಹೆಸರಿನ ಪ್ರೀತಿಯ ಬೆಕ್ಕನ್ನು 2005 ರಲ್ಲಿ ಕಳೆದುಕೊಂಡಿದ್ದರು. ಮನೆಯ ಹಿಂದೆ ಹೋದ ಬೆಕ್ಕು ನಾಪತ್ತೆಯಾಗಿತ್ತು. ಅದನ್ನು ಹುಡುಕಲು ಸಾಕಷ್ಟು ಪ್ರಯತ್ನಪಟ್ಟು ವಿಫಲರಾಗಿದ್ದರು‌. ದೂರು ದಾಖಲಿಸಿದ್ದರು. ಇನ್ನು ಬೆಕ್ಕು ಸಿಗದು ಎಂದು ಕೈ ಚೆಲ್ಲಿದ್ದರು‌. ಆದರೆ, ಏಜೆನ್ಸಿಯು ಬೆಕ್ಕಿಗೆ ಅಳವಡಿಸಿದ್ದ‌ ಚಿಪ್‌ ಸಹಾಯದಿಂದ ಇದೀಗ ಅದನ್ನು ಹುಡುಕಿ ತಂದಿದೆ.

ಸಾರ್ಥಕತೆ ಮೆರೆದ ಡಾಕ್ಟರ್ ಗೆ ವ್ಯಾಪಕ ಪ್ರಶಂಸೆ: ತಂದೆಯ ಸಾವಿನ ನೋವಲ್ಲೂ ಇಬ್ಬರ ಜೀವ ಉಳಿಸಿದ ವೈದ್ಯ

ಆದರೆ, 15 ವರ್ಷಗಳ ನಂತರ ಮನೆಗೆ ಮರಳಿದ ಬ್ರ್ಯಾಂಡಿಗೆ ಖುಷಿ ಪಡುವ ಪರಿಸ್ಥಿತಿ ಇಲ್ಲ. ಏಕೆಂದರೆ ಮಾಲೀಕ ಚಾರ್ಲ್ಸ್ ಇನ್ನೆರಡು ಬೆಕ್ಕುಗಳನ್ನು ತಂದಿದ್ದಾರೆ. ಬ್ರ್ಯಾಂಡಿ ಈಗ ಅವುಗಳ ಜತೆಯೇ ಇದೆ. ಆದರೆ, ಅದಕ್ಕೆ ವೈಯಕ್ತಿಕ ಕಾಳಜಿ ವಹಿಸಲಾಗುತ್ತಿಲ್ಲ ಎಂದಿದ್ದಾರೆ ಚಾರ್ಲ್ಸ್.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...