alex Certify ಆನೆಮರಿಯ ತುಂಟಾಟದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಮರಿಯ ತುಂಟಾಟದ ವಿಡಿಯೋ ವೈರಲ್

ಸಾಧಾರಣವಾಗಿ ಸಾಕುಪ್ರಾಣಿಗಳಲ್ಲಿ ಕಂಡುಬರುವ ಈ ತುಂಟಾಟಗಳು ವನ್ಯಜೀವಿಗಳಲ್ಲೂ ಅಪರೂಪಕ್ಕೊಮ್ಮೆ ಕಾಣುತ್ತದೆ‌.

ಐಎಫ್ಎಸ್ ಅಧಿಕಾರಿ ಸುಶಾಂತಾ ನಂದ ಟ್ವೀಟ್ ಮಾಡಿರುವ ಅಂತಹುದೇ ಒಂದು ಮುದ್ದಾದ ವಿಡಿಯೋ ನೆಟ್ಟಿಗರನ್ನು ಸೆಳೆದಿದೆ. 47,100 ಜನರು ವಿಡಿಯೋ ವೀಕ್ಷಿಸಿದ್ದು, 3,400 ಮಂದಿ ಮೆಚ್ಚಿಕೊಂಡಿರುವುದೂ ಅಲ್ಲದೆ, 468 ಮಂದಿ ರೀಟ್ವೀಟ್ ಮಾಡಿದ್ದಾರೆ.

ಆನೆಯ ಮರಿಯೊಂದು ತನ್ನ ಅಗಲವಾದ ಕಿವಿ, ಸೊಂಡಿಲನ್ನು ಆಡಿಸುತ್ತಾ ನೀರಿನ ಬಳಿಗೆ ಬರುತ್ತದೆ‌. ಸೊಂಡಿಲಿನಿಂದ ನೀರು ತೆಗೆದುಕೊಂಡು ಲಘುಬಗೆಯ ಹೆಜ್ಜೆ ಇಟ್ಟು ಒಂಟೆ ಮರಿಯತ್ತ ಓಡುತ್ತದೆ.

ಮುಖ ತಿರುಗಿಸಿ ನಿಂತಿರುವ ಒಂಟೆ ಮರಿಯ ಮೇಲೆ ಸೊಂಡಿಲಿನಿಂದ ನೀರು ಸಿಂಪಡಿಸುವ ಆನೆಮರಿ, ತಾನೇನೋ ಸಾಹಸ ಮೆರೆದಂತೆ, ಒಂಟೆಮರಿಯನ್ನು ಕೆಣಕಿದಂತೆ ನಗೆ ಬೀರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...