alex Certify ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ

ಡೇಟಿಂಗ್ ಅಪ್ಲಿಕೇಶನ್​ಗಳು ಈಗೀಗ ತುಂಬಾನೇ ಪ್ರಚಲಿತವಾಗ್ತಿವೆ. ಕಳೆದ ವರ್ಷದಿಂದ ಕೋವಿಡ್​ 19 ಜೊತೆಯಲ್ಲೆ ಆನ್​ಲೈನ್​ ಡೇಟಿಂಗ್​ ಅಪ್ಲಿಕೇಶನ್​ಗಳೂ ಸಹ ಭಾರೀ ಫೇಮಸ್​ ಆಗಿವೆ. ಸಾಮಾನ್ಯವಾಗಿ ಸಂಗಾತಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ ಅವರ ಚಿಂತನೆ, ಸೌಂದರ್ಯ, ಕುಟುಂಬದ ಬಗ್ಗೆ ಹೀಗೆ ಹಲವಾರು ಆಯಾಮಗಳನ್ನ ನೋಡಿ ನಿರ್ಧಾರಕ್ಕೆ ಬರಲಾಗುತ್ತೆ.

ಹೀಗಾಗಿ ಇಂತಹ ಅಪ್ಲಿಕೇಶನ್​ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳಬೇಕಾಗುತ್ತೆ. ಆದರೆ ಈ ಡೇಟಿಂಗ್​ ಆಪ್​ಗಳು ಇದೀಗ ಹೊಸದೊಂದು ಪ್ರಶ್ನೆಯನ್ನ ಬಳಕೆದಾರರಿಗೆ ಕೇಳುತ್ತಿವೆ.

ಟಿಂಡರ್​, ಬಂಬಲ್​, ಒಕೆ ಕ್ಯುಪಿಡ್​ ಹೀಗೆ ನಾನಾ ಆನ್​ಲೈನ್​ ಡೇಟಿಂಗ್​ ಅಪ್ಲಿಕೇಶನ್​ಗಳು ಲಭ್ಯವಿದೆ. ಇದರಲ್ಲಿ ಕೆಲ ಅಪ್ಲಿಕೇಶನ್​ಗಳು ಲಸಿಕೆ ಸ್ವೀಕಾರದ ಬಗ್ಗೆಯೂ ಮಾಹಿತಿ ಕೇಳಿವೆ. ಇಲೇಟ್​ ಡೇಟ್​ ಎಂಬ ಅಪ್ಲಿಕೇಶನ್​ ಒಂದರಲ್ಲಿ ವ್ಯಾಕ್ಸಿನ್​ ಸ್ಟೇಟಸ್​ ಎಂಬ ಹೊಸ ಆಯ್ಕೆಯನ್ನ ನೀಡಲಾಗಿದ್ದು, ಇದರಲ್ಲಿ ನೀವು ಎಷ್ಟು ಡೋಸ್​ ಲಸಿಕೆ ಪೂರೈಸಿದ್ದೀರಿ ಎಂಬ ಮಾಹಿತಿ ನೀಡಬೇಕಾಗುತ್ತೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಓಕೆ ಕ್ಯೂಪಿಡ್​​ ವಕ್ತಾರ ಮಿಶೆಲ್​ ಕಾಯೆ, ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ನೀವು ಲಸಿಕೆ ಪಡೆದಿದ್ದೀರಾ ಎಂಬ ಮಾಹಿತಿಯನ್ನ ನೀಡೋದು ಸದ್ಯದ ಹಾಟೆಸ್ಟ್ ವಿಚಾರಗಳಲ್ಲಿ ಒಂದಾಗಿದೆ. ಯಾರು ಲಸಿಕೆಗಳನ್ನ ಸ್ವೀಕರಿಸಿದ್ದಾರೋ ಅಂತವರಿಗೆ ಹೆಚ್ಚು ಲೈಕ್ಸ್​ ಸಿಗುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...