ಸಲಿಂಗಿಗಳ ವಿವಾಹದಿಂದಾಗಿಯೇ ವಿಶ್ವದಲ್ಲಿ ಕೊರೊನಾ ವೈರಸ್ ತಾಂಡವವಾಡ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಸ್ಕಾಟಿಶ್ ರಾಜಕಾರಣಿ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ.
ಸ್ಕಾಟ್ಲ್ಯಾಂಡ್ನ ಸಟ್ಲಾಂಡ್ ಭಾಗದ ಸ್ವತಂತ್ರ್ಯ ಅಭ್ಯರ್ಥಿ ಪೀಟರ್ ಟೇಟ್ ಎಂಬವರು ಕೆಲ ದಿನಗಳ ಹಿಂದಷ್ಟೇ ಸಲಿಂಗಿಗಳ ವಿವಾಹದಿಂದಾಗಿ ಡೆಡ್ಲಿ ಕೊರೊನಾ ವೈರಸ್ ಯುಗ ಆರಂಭವಾಗಿದೆ ಎಂದು ಹೇಳಿದ್ದರು.
ಈ ಹಿಂದೆ ಕೃಷಿಕನಾಗಿದ್ದ ಟೇಯ್ಟ್, ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. ನಾನು ಧಾರ್ಮಿಕ ನಂಬಿಕೆಗಳನ್ನ ಪ್ರಭಾವಿತವಾಗಿ ಈ ಅಭಿಪ್ರಾಯವನ್ನ ಮಂಡಿಸುತ್ತಿದ್ದೇನೆ ಎಂದು ಹೇಳಿದ್ದರು.
ಸಲಿಂಗಿಗಳ ವಿವಾಹ ವಿಚಾರವಾಗಿ ಮಾತನಾಡಿದ ಟೇಯ್ಟ್, ನಾನು ಸಲಿಂಗಿಗಳ ವಿವಾಹಕ್ಕೆ ಎಂದಿಗೂ ವಿರೋಧಿಯಾಗಿದ್ದೇನೆ. ಅಲ್ಲದೇ ಕೊರೊನಾಗೂ ಇದಕ್ಕೂ ಸಂಬಂಧವಿದೆ ಎಂದು ನನಗನಿಸುತ್ತಿದೆ ಎಂದು ಹೇಳಿದ್ದಾರೆ .
ಟೇಯ್ಟ್ರ ಹೇಳಿಕೆಗಳು ಸಲಿಂಗ ವರ್ಗದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದೊಂದು ಮೂರ್ಖ ಅಭಿಪ್ರಾಯ ಎಂದು ಜರಿದಿದ್ದಾರೆ.
ಕೋವಿಡ್ಗೂ ಸಲಿಂಗ ಕಾಮಿ ವಿವಾಹಕ್ಕೂ ಕಾರಣವಿದೆ ಅನ್ನೋದು ಒಂದು ಹ್ಯಾಸ್ಪಾಸ್ಪದ ಹೇಳಿಕೆಯಾಗಿದೆ. ಇದು ಸಲಿಂಗಕಾಮಿಗಳ ವಿರುದ್ಧ ಅವರಿಗಿರುವ ದ್ವೇಷವನ್ನ ತೋರಿಸುತ್ತೆ ಎಂದು ಎಲ್ಜಿಬಿಟಿಕ್ಯೂ ಸಂಸ್ಥೆಯೊಂದು ಹೇಳಿದೆ.
ಕೊರೊನಾ ವೈರಸ್ಗಾಗಿ ಸಲಿಂಗಕಾಮಿಗಳನ್ನ ದೂಷಿಸಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಉಕ್ರೇನ್ನ ಚರ್ಚ್ ಒಂದರ ಮುಖ್ಯಸ್ಥ ಪುರುಷರು ಮಾಡುವ ಪಾಪಗಳಿಗೆ ದೇವರು ನೀಡಿದ ಶಿಕ್ಷೆ ಇದು ಎಂದು ಹೇಳಿದ್ದರು.