alex Certify ಕೊರೊನಾ ವೈರಸ್​ಗೆ ಸಲಿಂಗಿ ವಿವಾಹವೇ ಕಾರಣವೆಂದ ಜನಪ್ರತಿನಿಧಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್​ಗೆ ಸಲಿಂಗಿ ವಿವಾಹವೇ ಕಾರಣವೆಂದ ಜನಪ್ರತಿನಿಧಿ..!

ಸಲಿಂಗಿಗಳ ವಿವಾಹದಿಂದಾಗಿಯೇ ವಿಶ್ವದಲ್ಲಿ ಕೊರೊನಾ ವೈರಸ್​ ತಾಂಡವವಾಡ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಸ್ಕಾಟಿಶ್​ ರಾಜಕಾರಣಿ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

ಸ್ಕಾಟ್​ಲ್ಯಾಂಡ್​​ನ ಸಟ್ಲಾಂಡ್​​ ಭಾಗದ ಸ್ವತಂತ್ರ್ಯ ಅಭ್ಯರ್ಥಿ ಪೀಟರ್​ ಟೇಟ್​ ಎಂಬವರು ಕೆಲ ದಿನಗಳ ಹಿಂದಷ್ಟೇ ಸಲಿಂಗಿಗಳ ವಿವಾಹದಿಂದಾಗಿ ಡೆಡ್ಲಿ ಕೊರೊನಾ ವೈರಸ್​ ಯುಗ ಆರಂಭವಾಗಿದೆ ಎಂದು ಹೇಳಿದ್ದರು.

ಈ ಹಿಂದೆ ಕೃಷಿಕನಾಗಿದ್ದ ಟೇಯ್ಟ್, ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. ನಾನು ಧಾರ್ಮಿಕ ನಂಬಿಕೆಗಳನ್ನ ಪ್ರಭಾವಿತವಾಗಿ ಈ ಅಭಿಪ್ರಾಯವನ್ನ ಮಂಡಿಸುತ್ತಿದ್ದೇನೆ ಎಂದು ಹೇಳಿದ್ದರು.

ಸಲಿಂಗಿಗಳ ವಿವಾಹ ವಿಚಾರವಾಗಿ ಮಾತನಾಡಿದ ಟೇಯ್ಟ್, ನಾನು ಸಲಿಂಗಿಗಳ ವಿವಾಹಕ್ಕೆ ಎಂದಿಗೂ ವಿರೋಧಿಯಾಗಿದ್ದೇನೆ. ಅಲ್ಲದೇ ಕೊರೊನಾಗೂ ಇದಕ್ಕೂ ಸಂಬಂಧವಿದೆ ಎಂದು ನನಗನಿಸುತ್ತಿದೆ ಎಂದು ಹೇಳಿದ್ದಾರೆ .

ಟೇಯ್ಟ್​ರ ಹೇಳಿಕೆಗಳು ಸಲಿಂಗ ವರ್ಗದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದೊಂದು ಮೂರ್ಖ ಅಭಿಪ್ರಾಯ ಎಂದು ಜರಿದಿದ್ದಾರೆ.

ಕೋವಿಡ್​ಗೂ ಸಲಿಂಗ ಕಾಮಿ ವಿವಾಹಕ್ಕೂ ಕಾರಣವಿದೆ ಅನ್ನೋದು ಒಂದು ಹ್ಯಾಸ್ಪಾಸ್ಪದ ಹೇಳಿಕೆಯಾಗಿದೆ. ಇದು ಸಲಿಂಗಕಾಮಿಗಳ ವಿರುದ್ಧ ಅವರಿಗಿರುವ ದ್ವೇಷವನ್ನ ತೋರಿಸುತ್ತೆ ಎಂದು ಎಲ್​ಜಿಬಿಟಿಕ್ಯೂ ಸಂಸ್ಥೆಯೊಂದು ಹೇಳಿದೆ.

ಕೊರೊನಾ ವೈರಸ್​ಗಾಗಿ ಸಲಿಂಗಕಾಮಿಗಳನ್ನ ದೂಷಿಸಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಉಕ್ರೇನ್​​ನ ಚರ್ಚ್​ ಒಂದರ ಮುಖ್ಯಸ್ಥ ಪುರುಷರು ಮಾಡುವ ಪಾಪಗಳಿಗೆ ದೇವರು ನೀಡಿದ ಶಿಕ್ಷೆ ಇದು ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...