alex Certify ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….!

ನ್ಯೂಯಾರ್ಕ್: ಕ್ರೀಡಾಂಗಣದಲ್ಲಿ ಐಸ್ ಮೃದು ಮಾಡುವ ಯಂತ್ರಕ್ಕೆ ಬೆಂಕಿ ಹತ್ತಿಕೊಂಡು ಉರಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಯಾರ್ಕ್ ಬಿಲ್ ಗ್ರೇಸ್ ರೀಜನಲ್ ಐಸ್ ಫ್ಲೆಕ್ಸ್ ನಲ್ಲಿ ನಡೆದ ಘಟನೆ ಇದಾಗಿದೆ.‌

ಐಸ್ ಹಾಕಿ ಮ್ಯಾಚ್ ಒಂದು ಮುಗಿದ ನಂತರ ರಾತ್ರಿ 8 ಗಂಟೆಯ ಹೊತ್ತಿಗೆ ಡ್ರೈವರ್ ಕ್ರೀಡಾಂಗಣದಲ್ಲಿದ್ದ ಐಸ್ ಮೃದು ಮಾಡುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನಂತರವೂ ಯಂತ್ರ ಸ್ವಲ್ಪ ದೂರ ಚಲಿಸಿ ನಿಂತಿದೆ.‌

ಮೇರಿ‌ ಎಂಬ ಮಹಿಳೆ ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಅವರ ಮಗನನ್ನ ಅವರು ಆ ಸಮಯದಲ್ಲಿ ಕ್ರೀಡಾಂಗಣದಲ್ಲಿ ತರಬೇತಿಗಾಗಿ ಕರೆದೊಯ್ದಿದ್ದರು. ಆಗ ಆತಂಕಕಾರಿ ಘಟನೆ ನಡೆಯಿತು. ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...