alex Certify ಕಾಫಿ ಪುಡಿಯಲ್ಲಿ ಗಿನ್ನೆಸ್ ದಾಖಲೆ ಕಲಾಕೃತಿ ರಚಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಫಿ ಪುಡಿಯಲ್ಲಿ ಗಿನ್ನೆಸ್ ದಾಖಲೆ ಕಲಾಕೃತಿ ರಚಿಸಿದ ಮಹಿಳೆ

ಜಗತ್ತಿನ ಅತಿ ದೊಡ್ಡ ಕಾಫಿ ಪೇಂಟಿಂಗ್‌ ಕಲಾಕೃತಿ ಸೃಷ್ಟಿಸಿರುವ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಪುಸ್ತಕ ಸೇರಿದ್ದಾರೆ.

ಒಹುದ್ ಅಬ್ದುಲ್ಲಾ ಅಲ್ಮಾಲ್ಕೀ ಹೆಸರಿನ ಈ ಮಹಿಳೆ, ಬಳಕೆ ಅವಧಿ ಮುಗಿದು ಹೋದ ಕಾಫಿ ಪುಡಿ ಬಳಸಿಕೊಂಡು ಸೌದಿ ಹಾಗೂ ನೆರೆಯ ದೇಶ ಯುಎಇಯ ಪ್ರಮುಖ ನಾಯಕರ ಚಿತ್ರವನ್ನು 220 ಚದರ ಅಡಿ ಜಾಗದಲ್ಲಿ ರಚಿಸಿದ್ದಾರೆ. ’ನಸೀಜ್‌ 1’ (ಜೊತೆಯಾಗಿ ಬೆಸೆದ) ಹೆಸರಿನ ಈ ಚಿತ್ರವನ್ನು, ಏಳು ಬಟ್ಟೆಗಳನ್ನು ಜೋಡಿಸಿ, ಅವುಗಳ ಮೇಲೆ ಬರೆಯಲಾಗಿದೆ. ಜೆಡ್ಡಾ ನಗರದಲ್ಲಿ ಈ ಚಿತ್ರ ರಚಿಸಲಾಗಿದೆ.

“ಈ ಕೆಲಸವನ್ನು ಪೂರ್ಣಗೊಳಿಸಲು ನನಗೆ 45 ದಿನಗಳು ಬೇಕಾಯಿತು. ಇಬ್ಬರು ಸಾಕ್ಷಿಗಳು ಈ ಕೆಲಸದ ವಿಡಿಯೋ ಹಾಗೂ ಡ್ರೋನ್ ಫುಟೇಜ್ ಮಾಡಿಕೊಂಡಿದ್ದಾರೆ” ಎಂದು ಅಲ್ಮಾಲ್ಕೀ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...