alex Certify BIG NEWS: ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

ಬ್ರಿಟನ್​ನಲ್ಲಿ ಕೊರೊನಾ ವೈರಸ್​ ಸೋಂಕು ಅತಿಯಾಗಿ ವ್ಯಾಪಿಸುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಸೌದಿ ಅರೇಬಿಯಾ ಭಾನುವಾರ ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನ ಸ್ಥಗಿತಗೊಳಿಸಿದೆ. ನೌಕಾ ಯಾನ ಹಾಗೂ ಭೂ ಮಾರ್ಗದ ಮೂಲಕವೂ ಸೌದಿಗೆ ಪ್ರವೇಶ ಮಾಡಲು ಕನಿಷ್ಟ ಒಂದು ವಾರಗಳ ಕಾಲ ನಿರ್ಬಂಧ ಹೇರಲಾಗಿದೆ.

ಒಂದು ವಾರದ ಅವಧಿಗೆ ಸೌದಿ ಅರೇಬಿಯಾದಲ್ಲಿ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರುತ್ತಿದ್ದೇವೆ. ಈ ನಿರ್ಬಂಧದ ಅವಧಿ ಮುಂದಿನ ವಾರಕ್ಕೂ ಮುಂದುವರಿಯಬಹುದು ಅಂತಾ ಸೌದಿ ಅಧಿಕೃತ ಪತ್ರಿಕಾ ಸಂಸ್ಥೆ ಮಾಹಿತಿ ನೀಡಿದೆ.

ಕೇವಲ ವಿಮಾನಯಾನ ಮಾತ್ರವಲ್ಲದೇ ಭೂ ಮಾರ್ಗ ಹಾಗೂ ಬಂದರುಗಳ ಮೂಲಕ ದೇಶದ ಪ್ರವೇಶವನ್ನೂ ಸ್ಥಗಿತಗೊಳಿಸಲಾಗಿದೆ. ಇದೂ ಕೂಡ ಇನ್ನೊಂದು ವಾರಕ್ಕೆ ವಿಸ್ತರಣೆಯಾಗಬಹುದು ಅಂತಾ ಆಂತರಿಕ ಸಚಿವಾಲಯ ಹೇಳಿದೆ. ಆದರೆ ಪ್ರಸ್ತುತ ಸೌದಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ವಿಮಾನಗಳು ತಮ್ಮ ದೇಶಕ್ಕೆ ವಾಪಸ್​ ಪ್ರಯಾಣ ಬೆಳೆಸಬಹುದು ಎಂದು ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...