alex Certify ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತೆ ಈ ಪಾದರಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತೆ ಈ ಪಾದರಕ್ಷೆ

ಕೊರೊನಾ ಸಾಂಕ್ರಾಮಿಕ ರೋಗದ ಬಳಿಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೆ ಸಾಕಷ್ಟು ಮಹತ್ವ ಸಿಗುತ್ತಿದೆ.

ಹೋಟೆಲ್, ಸಾರಿಗೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿವಿಧ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಇದೇ ವೇಳೆ ರೊಮೇನಿಯಾದಲ್ಲಿ ಚಪ್ಪಲಿ, ಶೂ ತಯಾರಕರೊಬ್ಬರು ಹೊಸ ಪ್ರಯೋಗ ಮಾಡಿದ್ದಾರೆ.

ಟ್ರಾನ್ಸಿಲ್ವೇನಿಯ ನಗರದ ಶೂ ತಯಾರಕ ಗ್ರಿಗೋರ್ ಲೂಪ್ ಉದ್ದನೆ ಮೂತಿಯ ಚರ್ಮದ ಬೂಟ್ಸ್ ಗಳನ್ನು ತಯಾರಿಸಿದ್ದಾರೆ. ನಾನು ಮಾರ್ಕೆಟ್ಟಿಗೆ ಹೋದಾಗ ಅಲ್ಲಿ ಸಾಮಾಜಿಕ ಅಂತರ ಇಲ್ಲದಿರುವುದನ್ನು ಗಮನಿಸಿದೆ, ಹೀಗಾಗಿ ಈ ರೀತಿಯ ಉದ್ದನೆಯ ಬೂಟುಗಳನ್ನು ತಯಾರಿಸಿದ್ದೇನೆ. ಇಬ್ಬರು ಇಂಥದ್ದೇ ಧರಿಸಿದರೆ ಸರಿಸುಮಾರು ಒಂದೂವರೆ ಮೀಟರ್ ಅಂತರ ಕಾಯ್ದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಯೂರೋಪಿಯನ್ ಸೈಜ್ ಪ್ರಕಾರ 75 ಅಳತೆಯ ಬೂಟ್ಸ್ ನ್ನು ಅವರು ಪರಿಚಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...