alex Certify 10 ವರ್ಷಗಳ ಹಿಂದೆ ಕಳುವಾಗಿದ್ದ ದುಬಾರಿ ಪ್ರತಿಮೆಯನ್ನ ಪತ್ತೆ ಹಚ್ಚಿದ ಪೊಲೀಸರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ವರ್ಷಗಳ ಹಿಂದೆ ಕಳುವಾಗಿದ್ದ ದುಬಾರಿ ಪ್ರತಿಮೆಯನ್ನ ಪತ್ತೆ ಹಚ್ಚಿದ ಪೊಲೀಸರು…..!

2011ರಲ್ಲಿ ಕಳುವಾಗಿದ್ದ 1ನೇ ಶತಮಾನದ ರೋಮನ್​ ಪ್ರತಿಷ್ಟಿತ ರೋಮನ್​ ಪ್ರತಿಮೆಯನ್ನ ವಾಪಸ್​ ಪಡೆಯುವಲ್ಲಿ ಇಟಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಲ್ಜಿಯಂನ ಪ್ರಾಚೀನ ವಸ್ತುಗಳ ಅಂಗಡಿಯಲ್ಲಿ ಈ ಪ್ರತಿಮೆಯನ್ನ ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಟೊಗಾಟಸ್​ ಪ್ರತಿಮೆಯು ಬರೋಬ್ಬರಿ 8967984.74 ರೂಪಾಯಿ ಮೌಲ್ಯವನ್ನ ಹೊಂದಿದೆ. ಈ ಪ್ರತಿಮೆಯನ್ನ 2011ರ ನವೆಂಬರ್​ ತಿಂಗಳಲ್ಲಿ ರಾಜಧಾನಿ ಹೊರವಲಯದ ವಿಲ್ಲಾ ಮರಿನಿ ಡೆಟ್ಟಿನಾ ಪುರಾತತ್ವ ಸ್ಥಳದಿಂದ ಕಳವು ಮಾಡಲಾಗಿತ್ತು.

ಆರ್ಟ್​ ಸ್ಕ್ವಾಡ್​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿ ಈ ಪ್ರತಿಮೆ ಇಟಲಿಗೆ ಸೇರಿದ್ದು ಎಂದು ಶಂಕಿಸಿದ್ದಾರೆ. ಇದಾದ ಬಳಿಕ ನಡೆಸಿದ ತನಿಖೆಯಲ್ಲಿ ಇದು ಕಳುವಾದ ಪ್ರತಿಮೆ ಎಂಬ ವಿಚಾರ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...