alex Certify ಗ್ರಾಹಕರ ಬೋರ್ ಹೋಗಲಾಡಿಸಲು ಸಖತ್ ಪ್ಲಾನ್ ಮಾಡಿದೆ ಈ ರೆಸ್ಟೋರೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ಬೋರ್ ಹೋಗಲಾಡಿಸಲು ಸಖತ್ ಪ್ಲಾನ್ ಮಾಡಿದೆ ಈ ರೆಸ್ಟೋರೆಂಟ್

ಕೊರೋನಾ ಕಾರಣದಿಂದ ವಿಶ್ವದಾದ್ಯಂತ ಸ್ಥಬ್ಧವಾಗಿದ್ದ ಹೋಟೆಲ್, ರೆಸ್ಟೋರೆಂಟ್ ಉದ್ಯಮ‌ ನಿಧಾನವಾಗಿ ಪುನರಾರಂಭವಾಗುತ್ತಿವೆ.

ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೋಟೆಲ್ ಗಳು ಸಾಕಷ್ಟು ಸರ್ಕಸ್ ಮಾಡುತ್ತಿವೆ. ಸಾಮಾಜಿಕ‌ ಅಂತರವೂ ಕಾಯ್ದುಕೊಳ್ಳಬೇಕು ಮತ್ತು ಗ್ರಾಹಕರಿಗೂ ಒಂಟಿತನ‌ ಕಾಡಬಾರದೆಂದು ಹೊಸ ಹೊಸ ಪ್ರಯೋಗ ಮಾಡಲಾಗುತ್ತಿದೆ.

ಬ್ಯಾಂಕಾಕ್‌ನ ಒಂದು ರೆಸ್ಟೋರೆಂಟ್ ನಲ್ಲಿ ಗ್ರಾಹಕರ ಆಸನದಲ್ಲಿ ಪಾಂಡಾ ಗೊಂಬೆಗಳನ್ನು ಇಡಲಾಗಿತ್ತು. ಇದೇ ರೀತಿಯ ಕ್ರಮದಲ್ಲಿ,‌ ಸಿಡ್ನಿಯಲ್ಲಿನ ಫೈವ್ ಡಾಕ್ ರೆಸ್ಟೋರೆಂಟ್ ಕಾರ್ಡ್ ಬೋರ್ಡ್ ಗ್ರಾಹಕರನ್ನು ಕುರ್ಚಿಗಳಲ್ಲಿ ಇರಿಸಿದೆ.

ಆಸ್ಟ್ರೇಲಿಯಾದಲ್ಲಿನ ರೆಸ್ಟೋರೆಂಟ್‌ಗಳು ಸಾಮಾಜಿಕ ದೂರವಿಡುವ ನಿಯಮಗಳನ್ನು ಪಾಲಿಸುವಾಗ ಒಂದು ಸಮಯದಲ್ಲಿ ಗರಿಷ್ಠ 10 ಗ್ರಾಹಕರನ್ನು ಕೂರಿಸಬಹುದು.

ಹೀಗಾಗಿ ಹತ್ತು ಗ್ರಾಹಕರು ಕೂರುವ ಜಾಗ ಹೊರತುಪಡಿಸಿ ಉಳಿದ ಖುರ್ಚಿಗಳಲ್ಲಿ ಗ್ರಾಹಕರನ್ನು ಹೋಲುವಂತೆ ಕಾರ್ಡ್ ಬೋರ್ಡ್ ಗೆ ವ್ಯಕ್ತಿಗಳ ಚಿತ್ರ ಅಂಟಿಸಿ ಖುರ್ಚಿಯಲ್ಲಿ ಕೂರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...