alex Certify ಹೊಸ ದಾಖಲೆ ಬರೆಯಲು ಸಜ್ಜಾದ ಟಿಂಟಿನ್​ ಕಾಮಿಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ದಾಖಲೆ ಬರೆಯಲು ಸಜ್ಜಾದ ಟಿಂಟಿನ್​ ಕಾಮಿಕ್​..!

1930ರಿಂದ ಜನರನ್ನ ರಂಜಿಸುತ್ತಾ ಬಂದಿರುವ ಪ್ರಖ್ಯಾತ ಬೆಲ್ಜಿಯಂ ಕಾರ್ಟೂನಿಸ್ಟ್​ ಹರ್ಜ್​ರ ಕಾಮಿಕ್​ ಇದೀಗ ಮತ್ತೊಂದು ಸಾಧನೆ ಮಾಡುವತ್ತ ದಾಪುಗಾಲನ್ನ ಇರಿಸಿದೆ.

2014ರಲ್ಲಿ ಈ ಕಾಮಿಕ್​ ಬುಕ್ ವಿಶ್ವ ದಾಖಲೆಯನ್ನ ನಿರ್ಮಾಣ ಮಾಡಿತ್ತು. 1937 ರಿಂದ 1958ರವರೆಗೆ ಪ್ರಕಟವಾದ ಟಿಂಟಿನ್​ ಸಂಪುಟಗಳ ಎರಡು ಪುಟಗಳ ರೇಖಾ ಚಿತ್ರವು 2.65 ಮಿಲಿಯನ್​ ಯುರೋಗಳಿಗೆ ಮಾರಾಟವಾಯಿತು.

ಟಿಂಟಿನ್​ 5ನೇ ಸರಣಿಯು ಹರ್ಜ್​ ಪಾತ್ರದ ಬೆಳವಣಿಗೆಯಲ್ಲಿ ಹೊಸ ಮೈಲಿಗಲ್ಲಾಗಿದೆ. ಇದು 2.2 ರಿಂದ 2.8 ಮಿಲಿಯನ್​ ಯುರೋಗಳಿಗೆ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ.

2.16ರಲ್ಲಿ ಟಿಂಟಿನ್​ ಎಕ್ಸ್​ ಫ್ಲೋರಸ್​ ಆನ್​ ದಿ ಮೂನ್​ ಪುಸ್ತಕದ ಮೂಲ ಚಿತ್ರವು 1.55 ಮಿಲಿಯನ್​ ಯುರೋಗಳಿಗೆ ಮಾರಾಟವಾಯಿತು. 34 ಸೆಂಮೀ.ಚದರ(13ಇಂಚು)ಅಳತೆಯ ಸಣ್ಣ ವರ್ಣಚಿತ್ರವನ್ನು ಗುರುವಾರ ನೀಡಲಾಗುತ್ತಿದ್ದು, ಚೀನಾದ ಡ್ರ್ಯಾಗನ್‌ನ ಭೀಕರ ಚಿತ್ರಣದ ಮುಂದೆ ಪಿಂಗಾಣಿ ಜಾರ್‌ನಿಂದ ಟಿಂಟಿನ್ ಮತ್ತು ಅವನ ನಾಯಿ ಸ್ನೋಯಿ ಹೊರಹೊಮ್ಮಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...