alex Certify ಮಿಂಚಿನ ಜತೆ ಕಾಮನಬಿಲ್ಲು; ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಂಚಿನ ಜತೆ ಕಾಮನಬಿಲ್ಲು; ಫೋಟೋ ವೈರಲ್

ಕಾಮನಬಿಲ್ಲು ನೋಡುವುದೇ ಅಪರೂಪ. ಅದರಲ್ಲೂ ಎರಡು ಕಾಮನಬಿಲ್ಲು ಒಟ್ಟಿಗೆ ಇರುವುದು ಇನ್ನೂ ಅಪರೂಪ. ಈ ಎರಡರೊಂದಿಗೆ ಮಿಂಚನ್ನು ನೋಡುವುದು ಕನಸಿನ ಮಾತು ಎಂದು ನೀವು ಅಂದುಕೊಂಡಿದ್ದರೆ ಅದನ್ನು ಈ ಫೋಟೋಗಳು ಸುಳ್ಳಾಗಿಸಿವೆ.

ಹೌದು, ಯುಕೆಯ ಮಂದಿ ಈ ಅತಿ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಈ ಕ್ಷಣವನ್ನು ಕೆಲವರು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದು, ಇದೀಗ ಭಾರಿ ವೈರಲ್‌ ಆಗಿದೆ. ಈ ರಮಣೀಯ ದೃಶ್ಯವನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಎರಡು ಕಾಮನಬಿಲ್ಲಿನ ಜತೆ, ಮಿಂಚಿನ ಫೋಟೋವನ್ನು ಯುಕೆಯ ಕೆಲವರು ಚಿತ್ರೀಕರಿಸಿದ್ದು, ಈ ಕ್ಷಣವನ್ನು ಸೆರೆಹಿಡಿದಿರುವುದಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಪ್ರಕೃತಿಯಲ್ಲಿ ಈ ರೀತಿಯ ಪ್ರಕ್ರಿಯೆ ನಡೆಯುವುದು ಸಹಜ ಎನ್ನುವ ಮಾತನ್ನು ತಜ್ಞರು ಹೇಳಿದ್ದಾರೆ. ಬಿಸಿಲು ಇದ್ದಾಗ ಗುಡುಗು ಮಿಂಚು ಕಾಣಿಸಿಕೊಂಡು, ಕಾಮನಬಿಲ್ಲು ಮಿಂಚಿನ ಮುಂದೆ ಕಾಣಿಸಿಕೊಂಡರೆ ಇದು ಸಹಜವಂತೆ. ಆದರೆ ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ನಿಜಕ್ಕೂ ಸವಾಲಿನ ಕೆಲಸವೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಗುಲಾಬಿ ಬಣ್ಣದ ಕಾಮನಬಿಲ್ಲನ್ನು ನೋಡಿದ್ದ ಯುಕೆ ಮಂದಿಗೆ ಇದು ಇನ್ನೊಂದು ವಿಸ್ಮಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...