alex Certify ಕೆಲಸದ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಿಸಿದವನಿಗೆ ನೆಟ್ಟಿಗರ ಪ್ರಶಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಿಸಿದವನಿಗೆ ನೆಟ್ಟಿಗರ ಪ್ರಶಂಸೆ

ಲಂಡನ್ ‌ನಲ್ಲಿ ರೈಲ್ವೇ ಸಿಬ್ಬಂದಿಯೊಬ್ಬರು ನಿಲ್ದಾಣದಲ್ಲಿದ್ದ ಕಳ್ಳನೊಬ್ಬನಿಂದ ಸೈಕಲ್‌ ಉಳಿಸುವುದು ಮಾತ್ರವಲ್ಲದೇ ಶಿಫ್ಟ್ ಮುಗಿದಿದ್ದರೂ ಮಾಲೀಕ ಬರುವ ಹಾದಿ ಕಾದು ಸೈಕಲ್ ನೀಡಿರುವ ಘಟನೆ ನಡೆದಿದೆ.

ಹೌದು, ಲಂಡನ್‌ನ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುಲ್ ಗಯಾರ್ ಎನ್ನುವ ವ್ಯಕ್ತಿ ಈ‌ ರೀತಿ ಸೈಕಲ್ ರಕ್ಷಣೆ‌ ಮಾಡುವುದರೊಂದಿಗೆ ಮಾಲೀಕರಿಗೆ ಸೈಕಲ್ ಒಪ್ಪಿಸಿದ್ದಾರೆ. ಈತ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕಳ್ಳನೊಬ್ಬ ಸೈಕಲ್ ಲಾಕ್ ಕತ್ತರಿಸುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಕಳ್ಳನನ್ನು ಅಲ್ಲಿಂದ ಓಡಿಸುವುದು ಮಾತ್ರವಲ್ಲದೇ ಸೈಕಲ್ ‌ನ್ನು ತಮ್ಮ ಸುಪರ್ದಿಯಲ್ಲಿರಿಸಿಕೊಂಡಿದ್ದರು.

ಆ ವೇಳೆಗೆ ತಮ್ಮ ಕೆಲಸದ ಅವಧಿ ಮುಗಿದಿದ್ದರೂ, ಮಾಲೀಕರಿಗೆ ಸೈಕಲ್ ಒಪ್ಪಿಸಬೇಕು ಎಂದು ಸುಮಾರು ನಾಲ್ಕೈದು ತಾಸು ಕಾದಿದ್ದಾರೆ. ಬಳಿಕ ಮಾಲೀಕ ಆಗಮಿಸಿದಾಗ ಸೈಕಲ್ ಕಾಣಿಸದಿರುವುದು ಕಂಡು, ಸಿಸಿ ಟಿವಿ ಘಟಕಕ್ಕೆ‌‌ ತೆರಳಿ ವಿಚಾರಿಸಿದಾಗ, ಅಬ್ದುಲ್ ‌ಸೈಕಲ್ ಲಾಕ್‌ನ ಪಾಸ್‌ವರ್ಡ್ ಚೆಕ್ ‌ಮಾಡಿ ನೀಡಿದ್ದಾರೆ. ಇದೀಗ ಸಿಬ್ಬಂದಿಯ ಈ ಕಾರ್ಯದಕ್ಷತೆಗೆ ಸಾಮಾಜಿಕ‌ ಜಾಲತಾಣದಲ್ಲಿ ಭಾರಿ‌‌ಪ್ರಶಂಸೆ ವ್ಯಕ್ತವಾಗಿದೆ.

Back to work today, forgot my pass so locked bike outside Cannon Street station. Left work at 6pm to find just the cut…

Posted by Steve Farmer on Monday, June 29, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...