alex Certify BIG NEWS: ಆಸ್ಟ್ರಾಜೆನಿಕಾ ಲಸಿಕೆ ಕುರಿತ ಗೊಂದಲಗಳಿಗೆ ತೆರೆ ಎಳೆದ ವಿಶ್ವ ಆರೋಗ್ಯ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಸ್ಟ್ರಾಜೆನಿಕಾ ಲಸಿಕೆ ಕುರಿತ ಗೊಂದಲಗಳಿಗೆ ತೆರೆ ಎಳೆದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆ  ಆಸ್ಟ್ರಾಜೆನೆಕಾ ಲಸಿಕೆಯ ಬಳಕೆಯನ್ನ ಮುಂದುವರಿಸಬಹುದು ಎಂದು ಖಚಿತ ಮಾಹಿತಿ ನೀಡಿದೆ. ಆಸ್ಟ್ರಾಜೆನಿಕಾ ಲಸಿಕೆಯನ್ನ ಬಳಕೆ ಮಾಡಿದ ಕೆಲ ದೇಶಗಳು ಲಸಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಯ ಸುರಕ್ಷತೆಯ ಕುರಿತ ಅಧ್ಯಯನ ನಡೆಸಿದೆ. ಡಬ್ಲುಹೆಚ್​​ಒ ಗ್ಲೋಬಲ್​​ ಎಡ್ವೈಸರಿ ಕಮಿಟಿ ಆನ್​​ ವ್ಯಾಕ್ಸಿನ್​ ಸೇಫ್ಟಿ ಲಸಿಕೆ ಬಗ್ಗೆ ಅಧ್ಯಯನ ನಡೆಸಿದೆ.

ಕೆಲ ದೇಶಗಳಲ್ಲಿ ಕೊರೊನಾದ ವಿರುದ್ಧ ಆಸ್ಟ್ರಾಜೆನಿಕಾದ ಲಸಿಕೆಯನ್ನ ಬಳಕೆ ಮಾಡಿದ ಬಳಿಕ ಅನೇಕರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಜರ್ಮನಿ, ಫ್ರಾನ್ಸ್ ಹಾಗೂ ಐರ್ಲೆಂಡ್​ ದೇಶಗಳು ಆಸ್ಟ್ರಾಜೆನಿಕಾ ಲಸಿಕೆ ಬಳಿಕೆಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದವು. ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್​ ಮ್ಯಾಕ್ರೋ ಐತಿಹಾಸಿಕ ರೂಪದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ಯುರೋಪಿಯನ್​ ಮೆಡಿಸಿನ್​ ಏಜೆನ್ಸಿ ಅಭಿಪ್ರಾಯವನ್ನ ಸಂಗ್ರಹಿಸುವವರೆಗೆ ಕಡಿಮೆ ಅಂದರೂ ಮಂಗಳವಾರದವರೆಗೆ ಈ ನಿರ್ಬಂಧ ಇರಲಿದೆ ಎಂದು ಹೇಳಿದ್ದರು.

ಹಾಗಂತ ಮ್ಯಾಕ್ರೋ 2ನೇ ಬಾರಿಗೆ ಆಸ್ಟ್ರಾಜೆನಿಕಾ ಬಳಕೆ ಆರಂಭವಾಗಬಹುದು ಎಂಬ ನಂಬಿಕೆಯನ್ನ ಹೊಂದಿದ್ದರು. ಇತ್ತ ಜರ್ಮನಿ ಕೂಡ ಸೋಮವಾರ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳು ವ್ಯಾಪಕವಾಗಿ ಕಂಡು ಬಂದ ಹಿನ್ನೆಲೆ ಲಸಿಕೆಯ ಬಳಕೆಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದೇವೆ ಎಂದು ಹೇಳಿತ್ತು. ಇತ್ತ ಐರ್ಲೆಂಡ್​ ಕೂಡ ಇದೇ ನಿರ್ಧಾರವನ್ನ ಕೈಗೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...