alex Certify ಅಮೆರಿಕ ಪ್ರವೇಶಿಸಲು 18 ಅಡಿ ಗೋಡೆ ಏರಿದ ಗರ್ಭಿಣಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಪ್ರವೇಶಿಸಲು 18 ಅಡಿ ಗೋಡೆ ಏರಿದ ಗರ್ಭಿಣಿ…!

ಅಮೆರಿಕದ ಎಲ್ಲೆಯೊಳಗೆ ಪ್ರವೇಶಿಸುವ ಯತ್ನದಲ್ಲಿ 18 ಅಡಿ ಎತ್ತರದ ಗೋಡೆಯೊಂದರ ಮೇಲೆ ಸಿಲುಕಿಹಾಕಿಕೊಂಡಿದ್ದ 23 ವರ್ಷದ ಗರ್ಭಿಣಿ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.

ಹೊಂಡುರಾಸ್‌ನ ಈ ಮಹಿಳೆ ಮೆಕ್ಸಿಕೋದ ಸಿಯುಡಾಡ್‌ ಜುವಾರೆಝ್ ಎಂಬಲ್ಲಿ ಈ 18 ಅಡಿಯ ಗೋಡೆಯನ್ನು ಒಂದು ಕಡೆಯಿಂದ ಏರಿದ ಬಳಿಕ ಅಮೆರಿಕ ಗಡಿಯ ಕಡೆಯಿಂದ ಇಳಿಯಲು ಸಾಧ್ಯವಾಗಿಲ್ಲ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕೂಡಲೇ ಮೆಕ್ಸಿಕೋಗೆ ಮತ್ತೆ ರವಾನೆ ಮಾಡಿದ್ದಾರೆ.

ಅಮೆರಿಕದ ವಲಸೆ ರಕ್ಷಣಾ ಏಜೆನ್ಸಿ ಈ ವಿಡಿಯೋ ಬಿಡುಗಡೆ ಮಾಡಿದ್ದು, ಅಗ್ನಿಶಾಮಕ ದಳದ ವಾಹನದ ಏಣಿ ನೆರವಿನಿಂದ ಭದ್ರತಾ ಸಿಬ್ಬಂದಿ ಆ ಮಹಿಳೆಯನ್ನು ತಲುಪಿ, ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಈಗ ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

ಅನಧಿಕೃತವಾಗಿ ಅಮೆರಿಕಕ್ಕೆ ಪ್ರವೇಶ ಮಾಡಿದ ಕಾರಣ ಕಾನೂನಾತ್ಮಕವಾಗಿ ಈಕೆಯನ್ನು ಮೆಕ್ಸಿಕೋಗೆ ಮರಳಿ ಕಳುಹಿಸಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...