alex Certify ಪಿಜ್ಜಾ ಹಿಟ್ಟಿನಲ್ಲಿ ಪತ್ತೆಯಾಯ್ತು ರೇಜರ್​ ಬ್ಲೇಡ್​​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಜ್ಜಾ ಹಿಟ್ಟಿನಲ್ಲಿ ಪತ್ತೆಯಾಯ್ತು ರೇಜರ್​ ಬ್ಲೇಡ್​​….!

Portland Man Arrested after Razor Blades Found in Fresh Pizza Dough

ಪೋರ್ಟ್ಲ್ಯಾಂಡ್ ​​ನ ಹೆಸರಾಂತ ಸೂಪರ್​ ಮಾರ್ಕೆಟ್​​ ಮೈನೇದಲ್ಲಿ ಮಾರಾಟವಾದ ಪಿಜ್ಜಾ ಹಿಟ್ಟಿನಲ್ಲಿ ರೇಜರ್​ ಬ್ಲೇಡ್​​ ಪತ್ತೆಯಾಗಿದೆ. ಈ ಸಂಬಂಧ ಶಂಕಿತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಪೋರ್ಟ್ಲ್ಯಾಂಡ್ ​​ನ ಪೈ ಬ್ರ್ಯಾಂಡ್​ ಉತ್ತಮ ಪಿಜ್ಜಾ ತಯಾರಿಕೆ ಉತ್ಪನ್ನಗಳನ್ನ ಪೂರೈಸುತ್ತೆ. ಹೀಗಾಗಿ ಇದೇ ಬ್ರ್ಯಾಂಡ್​ನ ಪಿಜ್ಜಾ ತಯಾರಿಕಾ ಹಿಟ್ಟನ್ನ ಗ್ರಾಹಕನೊಬ್ಬ ಖರೀದಿ ಮಾಡಿದ್ದಾನೆ. ಆದರೆ ಮನೆಗೆ ಹೋಗಿ ನೋಡಿದ ವೇಳೆ ಈ ಮಿಶ್ರಣದಲ್ಲಿ ರೇಜರ್​ ಬ್ಲೇಡ್​ ಕಂಡುಬಂದಿದ್ದು ಕೂಡಲೇ ಗ್ರಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಪಿಜ್ಜಾ ಉತ್ಪನ್ನಗಳ ತಯಾರಿಕಾ ಘಟಕದ ಮಾಜಿ ಉದ್ಯೋಗಿಯನ್ನ ಬಂಧಿಸಿದ್ದಾರೆ . ಅಲ್ಲದೇ ಆಗಸ್ಟ್ ಹಾಗೂ ಅಕ್ಟೋಬರ್​ 11ರವರೆಗೆ ನ್ಯೂಯಾರ್ಕ್, ವರ್ಮೋಂಟ್​, ಹ್ಯಾಂಪ್​ ಶೈರ್​ ಸೇರಿದಂತೆ 184 ಮಳಿಗೆಗಳಲ್ಲಿ ಮಾರಾಟವಾದ ಉತ್ಪನ್ನಗಳನ್ನ ವಾಪಾಸ್​ ಪಡೆಯಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...