alex Certify ರಸ್ತೆಗೆ ಬಂದ 400 ಪೌಂಡ್‌ ತೂಕದ ಹಂದಿ; ಟ್ರಾಫಿಕ್‌ ಜಾಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಗೆ ಬಂದ 400 ಪೌಂಡ್‌ ತೂಕದ ಹಂದಿ; ಟ್ರಾಫಿಕ್‌ ಜಾಮ್

ಅಮೆರಿಕದ ವರ್ಜೀನಿಯಾದಲ್ಲಿ ಹಂದಿಯೊಂದು ಹೆದ್ದಾರಿಯ ಮೇಲೆ ಬಂದ ಪರಿಣಾಮ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಈ ಘಟನೆ ಬುಧವಾರ ನಡೆದಿದ್ದು, ಸುಮಾರು 400 ಪೌಂಡ್‌ ತೂಕದ ಹಂದಿಯೊಂದು ಹೆದ್ದಾರಿಗೆ ಆಗಮಿಸಿದೆ. ಈ ವೇಳೆ ಅತ್ತಿಂದಿತ್ತ ಓಡಾಡಿಕೊಂಡಿದೆ. ಇದರಿಂದ ವಾಹನ ಸವಾರರು ಸಂಚರಿಸಲು ಸಾಧ್ಯವಾಗದೇ ಗಂಟೆಗಟ್ಟಲೆ ಕಾಯಬೇಕಾಗಿ ಬಂತು.

ಈ ರೀತಿ ಹೆದ್ದಾರಿಯ ಮೇಲೆ ನಾಲ್ಕು ಹಂದಿಗಳು ಕಾಣಿಸಿಕೊಂಡಿದೆ. ಆದ್ದರಿಂದ ಭಾರಿ ಸಮಸ್ಯೆಯಾಗಿತ್ತು. ಹೆದ್ದಾರಿಯಿಂದ ಈ ಹಂದಿಗಳನ್ನು ಪಕ್ಕಕ್ಕೆ ಕಳುಹಿಸಲು ಬರೋಬ್ಬರಿ ಒಂದು ಗಂಟೆಯಾಯಿತು. ಈ ವೇಳೆ ಹೆದ್ದಾರಿ ಮಧ್ಯೆಯಿದ್ದ ಅನೇಕರು ಹಂದಿಗಳು ಓಡಾಡಿಕೊಂಡಿರುವ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್‌ ಆಗಿದ್ದು, ಹಂದಿಗಳು ಮಾಡುತ್ತಿರುವ ಕಿಡಿಗೇಡಿತನಕ್ಕೆ ನೆಟ್ಟಿಗರು ಭಿನ್ನ-ವಿಭಿನ್ನ ಕಾಮೆಂಟ್‌ ಹಾಕಿದ್ದಾರೆ.

Well you don’t see this everyday? I’m not sure what happened because there was no truck or anyone stopped besides normal…

Posted by Bailie Hayden on Wednesday, July 1, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...