alex Certify ಪೆಂಗ್ವಿನ್ ‌ಗಳ ಹೃದಯಸ್ಪರ್ಶಿ ಚಿತ್ರ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಂಗ್ವಿನ್ ‌ಗಳ ಹೃದಯಸ್ಪರ್ಶಿ ಚಿತ್ರ ವೈರಲ್

ಒಳ್ಳೆಯ ಟೈಮಿಂಗ್ ಮಾಡಿ ಸೆರೆ ಹಿಡಿಯಲಾದ ಪ್ರಾಣಿಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇತ್ತೀಚಿನ ದಿನಗಳಲ್ಲಿ ಕಬಿನಿ ಅಭಯಾರಣ್ಯದಲ್ಲಿ ಸೆರೆ ಹಿಡಿದಿದ್ದ ಕರಿ ಚಿರತೆಯ ಚಿತ್ರವೊಂದು ನೆಟ್ಟಿಗರ ಮನಗೆದ್ದಿತ್ತು.

ಇದೀಗ ಎರಡು ಪೆಂಗ್ವಿನ್‌ಗಳು ಅಕ್ಕಪಕ್ಕ ಕುಳಿತುಕೊಂಡು ಒಂದಕ್ಕೊಂದು ಸಂತೈಸಿಕೊಳ್ಳುತ್ತಿರುವ ಚಿತ್ರವೊಂದು ಸಖತ್‌ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಓಶಿಯಾನೋಗ್ರಾಫಿಕ್ ಮ್ಯಾಗಜಿನ್‌ನ ಓಇಯನ್ ಫೋಟೋಗ್ರಾಫ್ ಪ್ರಶಸ್ತಿ ಸಿಕ್ಕಿದೆ.

ಈ ಪೆಂಗ್ವಿನ್‌ಗಳು ತಂತಮ್ಮ ಸಂಗಾತಿಗಳನ್ನು ಕಳೆದುಕೊಂಡ ಬಳಿಕ ಒಂದಕ್ಕೊಂದು ಸಮಾಧಾನ ಹೇಳಿಕೊಂಡು ಜೊತೆಯಲ್ಲಿ ಕಾಲ ಕಳೆಯುತ್ತಿವೆ ಎಂದು ಛಾಯಾಗ್ರಾಹಕರು ತಿಳಿಸಿದ್ದಾರೆ.

ಟೋಬಿಯಾಸ್ ಬಾವುಮ್‌ಗಾರ್ಟೆನರ್‌ ಎಂಬುವರು ಮೆಲ್ಬರ್ನ್‌‌ನಲ್ಲಿ ಸೆರೆ ಹಿಡಿದಿರುವ ಈ ಚಿತ್ರಕ್ಕೆ ಕಮ್ಯೂನಿಟಿ ಚಾಯ್ಸ್‌ ಪ್ರಶಸ್ತಿ ದೊರಕಿದೆ. ಈ ಚಿತ್ರವು ಇನ್‌ಸ್ಟಾಗ್ರಾಂನಲ್ಲೂ ಸಹ ಧೂಳೆಬ್ಬಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...