alex Certify ಇದು ವಿಂಡೋ ಶಾಪಿಂಗ್ ಅಲ್ಲ ವಿಂಡೋ ಶೂಟಿಂಗ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ವಿಂಡೋ ಶಾಪಿಂಗ್ ಅಲ್ಲ ವಿಂಡೋ ಶೂಟಿಂಗ್…!

ಮಹಾನಗರಗಳ ಮಾಲ್ ವಿಂಡೋ ಶಾಪಿಂಗ್ ಗೆ ಬಹಳ ಪ್ರಾಮುಖ್ಯತೆ ಇದೆ. ಇದೇ ರೀತಿ ಕ್ಯಾಲಿಫೋರ್ನಿಯಾದಲ್ಲಿ ವೈಟ್ ಎಂಬ ಛಾಯಾ ಗ್ರಾಹಕರು ಲಾಕ್ ಡೌನ್ ವೇಳೆ ವಿಂಡೋ ಫೋಟೋಗ್ರಫಿ ಮಾಡಿ ಗಮನ ಸೆಳೆದಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಅನಿವಾರ್ಯ ಹೊರತು ಸಾಮಾನ್ಯ ಚಟುವಟಿಕೆಗಳಿಗೆ ನಿರ್ಬಂಧವಿದೆ. ಅಂತದ್ದರಲ್ಲಿ ಛಾಯಾಗ್ರಾಹಕರಾದ ವೈಟ್, ವಿಂಡೋ ಶೂಟ್ ಮೂಲಕ ಅಂತರ್ಜಾಲದಲ್ಲಿ ಸದ್ದು ಮಾಡಿದ್ದಾರೆ. ತಮ್ಮ ಸುತ್ತಮುತ್ತಲಿನ ಜನರು ಲಾಕ್ ಚಿತ್ರಗಳನ್ನು ತೆಗೆದುಕೊಳ್ಳಲು ಅವರಿಗೆ ಬೇಡಿಕೆ ಇಡುತ್ತಿದ್ದಾರಂತೆ.

ಸ್ಪೀಕರ್ ಫೋನ್ ಮೂಲಕ ಫೋಟೋಗೆ ಬೇಕಾದ ಭಂಗಿಯನ್ನು ವ್ಯವಸ್ಥೆ ಮಾಡಿಕೊಳ್ಳಲಾಗುತ್ತದಂತೆ. ಲಾಕ್ ಡೌನ್ ಕೌಟುಂಬಿಕವಾಗಿ ಅಪರೂಪದ ಸಂದರ್ಭ ಎಂದು ಭಾವಿಸಿರುವ ಅನೇಕರು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ.

ಓದು, ವಿಶ್ರಾಂತಿ, ರೋಮ್ಯಾನ್ಸ್ ಸೇರಿ ವಿವಿಧ ಬಗೆಯ ಪೋರ್ಟರೇಟ್ ಫೋಟೋಗಳನ್ನು ಕಿಟಕಿಯನ್ನು ಬಳಸಿಯೇ ತೆಗೆದಿದ್ದು, ಲಾಕ್ ಡೌನ್ ಪ್ರತಿಬಿಂಬಿತವಾಗುತ್ತದೆ. ಈ ಸಂದರ್ಭದ ತಮ್ಮ ಕೆಲಸದ ಬಗ್ಗೆ ಅವರು ಹೆಮ್ಮೆ ಪಟ್ಟುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...