alex Certify BIG NEWS: 12 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಯೋಗ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 12 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಯೋಗ ಶುರು

ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆ ಎಂದು ಅಮೆರಿಕಾದ ಔಷಧಿ ಕಂಪನಿ ಫಿಜರ್ ಹೇಳಿದೆ. 2022 ರ ಆರಂಭದ ವೇಳೆಗೆ 12 ವರ್ಷ ಕೆಳಗಿನ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗ್ತಿದೆ.

ಬುಧವಾರ,ಮೊದಲ ಬ್ಯಾಚ್ ಮಕ್ಕಳಿಗೆ ಚುಚ್ಚು ಮದ್ದು ನೀಡಲಾಗಿದೆ. 12 ವರ್ಷ ಕೆಳಗಿನ ಹಾಗೂ 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಈ ಲಸಿಕೆ ಪ್ರಯೋಗ ನಡೆಯುತ್ತಿದೆ. ಹಿಂದಿನ ತಿಂಗಳು ಮಾಡರ್ನಾ ಇಂಕ್, 12 ವರ್ಷ ಕೆಳಗಿನ ಮಕ್ಕಳಿಗೆ ಪ್ರಯೋಗ ಶುರು ಮಾಡಿದೆ. ಡಿಸೆಂಬರ್ ನಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಫಿಜರ್-ಬಯೋಟೆಕ್‌ನ ಕೊರೊನಾ ಲಸಿಕೆ ಪ್ರಯೋಗ ನಡೆಸುವಂತೆ ಯುಎಸ್ ರೆಗ್ಯೂಲೆಟರ್ಸ್ ಅನುಮೋದಿಸಿತ್ತು. ಈವರೆಗೆ ಅಮೆರಿಕಾದಲ್ಲಿ 6.6 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ.

ಅಮೆರಿಕಾದಲ್ಲಿ 16-17ನೇ ವಯಸ್ಸಿನವರಿಗೆ ಫಿಜರ್-ಬಯೋಟೆಕ್ ಕೊರೊನಾ ಲಸಿಕೆ ಮಾತ್ರ ನೀಡಲಾಗ್ತಿದೆ. ಮಾಡರ್ನಾ ಲಸಿಕೆ ನೀಡಲಾಗ್ತಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮಾಡರ್ನಾ ಲಸಿಕೆ ನೀಡಲಾಗ್ತಿದೆ. ಮಕ್ಕಳಿಗೆ ಇನ್ನೂ ಯಾವುದೇ ಕೊರೊನಾ ಲಸಿಕೆ ಬಂದಿಲ್ಲ. ಎಲ್ಲವೂ ಪ್ರಯೋಗದ ಹಂತದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...