alex Certify ಟ್ರಂಪ್​ ಒಡೆತನದ ಕಟ್ಟಡ ನೆಲಸಮ ದೃಶ್ಯ ಕಣ್ತುಂಬಿಕೊಳ್ಳಲು ಹಣ ನೀಡಿದ ವಿರೋಧಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್​ ಒಡೆತನದ ಕಟ್ಟಡ ನೆಲಸಮ ದೃಶ್ಯ ಕಣ್ತುಂಬಿಕೊಳ್ಳಲು ಹಣ ನೀಡಿದ ವಿರೋಧಿಗಳು..!

ಒಂದು ಕಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಒಡೆತನ ಹೊಂದಿದ್ದ ಅಟ್ಲಾಂಟಿಕ್​ ಸಿಟಿಯಲ್ಲಿ 34 ಅಂತಸ್ತಿನ ಕ್ಯಾಸಿನೋವನ್ನ ಕೆಲವೇ ಸೆಕೆಂಡ್​​ಗಳಲ್ಲಿ ನೆಲಸಮ ಮಾಡಲಾಗಿದೆ. ಈ ದೃಶ್ಯವನ್ನ ನೋಡೋಕೆ ಜನರು 40 ಸಾವಿರ ರೂಪಾಯಿವರೆಗೆ ಪಾವತಿ ಮಾಡಿದ್ದಾರಂತೆ..!

ಕ್ಯಾಸಿನೋ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಪ್ಲಾಜಾ ಹೋಟೆಲ್​ 2014ರಿಂದಲೇ ಬಂದ್​ ಆಗಿತ್ತು. ಅಲ್ಲದೇ ಕಟ್ಟಡ ಕೂಡ ಶಿಥಿಲಾವಸ್ಥೆಗೆ ತಲುಪಿತ್ತು. ಇದು ದೊಡ್ಡ ಹಾಲಿವುಡ್​ ಸೆಲೆಬ್ರಿಟಿಗಳ ಫೇವರಿಟ್ ತಾಣವಾಗಿತ್ತು.

ಬುಧವಾರ ಬೆಳಗ್ಗೆ 9:08ರ ಸುಮಾರಿಗೆ ಸ್ಫೋಟಕಗಳನ್ನ ಬಳಕೆ ಮಾಡಿ ಈ ಬೃಹತ್​ ಕಟ್ಟಡವನ್ನ ಕೆಡವಲಾಗಿದೆ. ಕಟ್ಟಡ ನೆಲಸಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಕುತೂಹಲಕಾರಿ ವಿಚಾರ ಅಂದರೆ ಕಟ್ಟಡ ನೆಲಸಮದ ವಿಚಾರವನ್ನ ಇಂಟರ್ನೆಟ್​​ನಲ್ಲಿ ಭಾರೀ ಪ್ರಚಾರ ಮಾಡಲಾಗಿತ್ತು. ಹಾಗೂ ಈ ದೃಶ್ಯವನ್ನ ಲೈವ್​ ಆಗಿ ವೀಕ್ಷಿಸಲೂ ಅವಕಾಶವನ್ನ ನೀಡಲಾಗಿತ್ತು. ಇಷ್ಟು ಮಾತ್ರವಲ್ಲದೇ ಕಟ್ಟಡ ನೆಲಸಮದ ದೃಶ್ಯವನ್ನ ಕಣ್ಣಾರೆ ವೀಕ್ಷಿಸಲು ಕೆಲ ಟ್ರಂಪ್​ ವಿರೋಧಿಗಳು ಮುಂಬದಿ ಆಸನಗಳನ್ನೇ ಕಾದಿರಿಸಿದ್ದರು ಎನ್ನಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...