alex Certify ಕ್ಯಾಸಿನೋ ಜಾಹೀರಾತಿನಲ್ಲಿ ಫೋಟೋ ದುರ್ಬಳಕೆ; ಸಚಿನ್​ ತೆಂಡೂಲ್ಕರ್​ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಸಿನೋ ಜಾಹೀರಾತಿನಲ್ಲಿ ಫೋಟೋ ದುರ್ಬಳಕೆ; ಸಚಿನ್​ ತೆಂಡೂಲ್ಕರ್​ ಆಕ್ರೋಶ

ಸಾಮಾಜಿಕ ಮಾಧ್ಯಮಗಳಲ್ಲಿ ಕ್ಯಾಸಿನೋ ಬ್ರ್ಯಾಂಡ್​ ಪ್ರಚಾರಕ್ಕಾಗಿ ತಮ್ಮ ಫೋಟೋಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಹಲವು ಹೇಳಿಕೆಗಳನ್ನು ಟ್ವಿಟರ್​ನಲ್ಲಿ ನೀಡಿದ್ದಾರೆ. ತಮ್ಮ ಚಿತ್ರಗಳನ್ನು ಅಕ್ರಮವಾಗಿ ಬಳಸಿಕೊಂಡ ಕ್ಯಾಸಿನೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆಂದು ಸಚಿನ್​ ತೆಂಡೂಲ್ಕರ್​ ಎಚ್ಚರಿಕೆ ನೀಡಿದ್ದಾರೆ.

ಕ್ರಿಕೆಟ್​ ಲೋಕದಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡಿರುವ ಸಚಿನ್​ ತೆಂಡೂಲ್ಕರ್ ಈಗಾಗಲೇ ಸಾಕಷ್ಟು ವಾಣಿಜ್ಯ ಬ್ರ್ಯಾಂಡ್​ಗಳ ಜೊತೆಯಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಆದರೆ ಜೂಜು, ತಂಬಾಕು ಹಾಗೂ ಮದ್ಯಪಾನದಂತಹ ಕಂಪನಿಗಳ ಜೊತೆಯಲ್ಲಿ ನಾನೆಂದಿಗೂ ಕೆಲಸ ಮಾಡಲು ಒಪ್ಪಿಕೊಂಡಿಲ್ಲ ಎಂದು ಸಚಿನ್​ ಹೇಳಿದ್ದಾರೆ. ಆದರೆ ಜೂಜಾಟವನ್ನಾಡುವ ಕ್ಯಾಸಿನೋ ನನ್ನ ಫೋಟೋಗಳನ್ನು ಈ ರೀತಿಯಾಗಿ ಬಳಸಿಕೊಂಡಿರುವುದು ನೋವು ತಂದಿದೆ ಎಂದಿದ್ದಾರೆ.

ಟ್ವಿಟರ್​ನಲ್ಲಿ ಈ ಸಂಬಂಧ ಬರೆದುಕೊಂಡಿರುವ ಸಚಿನ್​ ತೆಂಡೂಲ್ಕರ್​, ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ದಾರಿಗೆ ಎಳೆಯುವಂತಹ ಚಿತ್ರಗಳ ಬಗ್ಗೆ ಜಾಗರೂಕರಾಗಿರಿ ಎಂಬ ಶೀರ್ಷಿಕೆಯಡಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಹಲವಾರು ಜಾಹೀರಾತುಗಳನ್ನು ತೋರಿಸಲಾಗುತ್ತಿದೆ. ಇದು ನನ್ನ ಗಮನಕ್ಕೂ ಬಂದಿದೆ. ನನ್ನ ಫೋಟೋವನ್ನು ಎಡಿಟ್​ ಮಾಡಿ ಕ್ಯಾಸಿನೋ ಜಾಹೀರಾತಿಗೆ ಬಳಸಿಕೊಳ್ಳಲಾಗಿದೆ.

ನಾನು ಜೂಜು, ತಂಬಾಕು ಅಥವಾ ಮದ್ಯಪಾನವನ್ನು ಎಂದಿಗೂ ಪ್ರೋತ್ಸಾಹಿಸಿಲ್ಲ. ಆದರೆ ನನ್ನ ಫೋಟೋವನ್ನು ಬಳಸಿಕೊಂಡು ಜನರ ದಾರಿತಪ್ಪಿಸಲು ಯತ್ನಿಸುತ್ತಿರುವುದನ್ನು ಕಂಡು ನನಗೆ ನೋವಾಗಿದೆ ಎಂದು ಹೇಳಿದ್ದಾರೆ.

ನನ್ನ ಕಾನೂನು ತಂಡವು ಈ ಸಂಬಂಧ ಸಾಕಷ್ಟು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಈ ನಡುವೆ ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಮುಖ್ಯವಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...