alex Certify ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

स्टडी में दावाः घर में भी आप कोरोना वायरस के संक्रमण से सुरक्षित नहीं

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ ವಸ್ತುಗಳಿಂದ ಕೊರೊನಾ ಹರಡುವ ಸಾಧ್ಯತೆಯಿದೆ ಎಂದಿದೆ.

ದಕ್ಷಿಣ ಕೊರಿಯಾದ ಈ ಅಧ್ಯಯನವನ್ನು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಜುಲೈ 16 ರಂದು ಪ್ರಕಟಿಸಿದೆ. ಈ ವರದಿಯು 5706 ಆರಂಭಿಕ ಕೊರೊನಾ ರೋಗಿಗಳನ್ನು ಆಧರಿಸಿದೆ.

ವಸ್ತುಗಳ ಸಂಪರ್ಕದಿಂದ 2 ರೋಗಿಗಳು ಮಾತ್ರ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಪ್ರತಿ 10ರಲ್ಲಿ ಒಬ್ಬ ರೋಗಿ ಮನೆ ಸದಸ್ಯನಿಂದ ಸೋಂಕಿಗೆ ಒಳಗಾಗಿದ್ದಾನೆ. ಕೊರೊನಾ ಯಾರನ್ನೂ ಬಿಡುವುದಿಲ್ಲ. ಮನೆಯಲ್ಲಿರುವ ಮಕ್ಕಳಿಂದ ಹಿಡಿದು 60 ಅಥವಾ 70 ವರ್ಷ ವಯಸ್ಸಿನವರ ಮೇಲೂ ಕೊರೊನಾ ದಾಳಿ ಮಾಡ್ತಿದೆ.

ಮಕ್ಕಳು ಮತ್ತು ವೃದ್ಧರು ಮನೆಯ ಎಲ್ಲ ಸದಸ್ಯರಿಗೆ ಹತ್ತಿರವಾಗಿರ್ತಾರೆ. ಹಾಗಾಗಿ ಅವ್ರಿಗೆ ಸೋಂಕು ಬೇಗ ತಗಲುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಹಲೀಮ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚೋ ಯಂಗ್ ಜುನ್ ಹೇಳಿದ್ದಾರೆ.  ಮಕ್ಕಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಸರಿಯಾಗಿ ಕಾಣಿಸುವುದಿಲ್ಲ. ಹಾಗಾಗಿ ಕೊರೊನಾ ಗುರುತಿಸುವಲ್ಲಿ ಆರಂಭಿಕ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...