ಸುಶಿ ಅನ್ನೋದು ಜಪಾನ್ ದೇಶದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಒಂದು. ಅಕ್ಕಿ, ಸಕ್ಕರೆ, ಉಪ್ಪು ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನ ಬಳಸಿ ಈ ಖಾದ್ಯವನ್ನ ತಯಾರು ಮಾಡಲಾಗುತ್ತೆ. ಈ ಖಾದ್ಯಗಳ ಬಗ್ಗೆ ಇಲ್ಲಿ ಹೇಳೋಕೂ ಪ್ರಮುಖ ಕಾರಣವಿದೆ.
ಥೈವಾನ್ನಲ್ಲಿ ಸುಶಿ ಖಾದ್ಯ ಉಚಿತವಾಗಿ ಸಿಗುತ್ತೆ ಎಂಬ ಒಂದೇ ಕಾರಣಕ್ಕೆ ತಮ್ಮ ಹೆಸರಿನ ಜೊತೆ ಮೀನಿನ ಹೆಸರನ್ನ ಸೇರಿಸಿಕೊಳ್ಳೋಕೆ ಸರ್ಕಾರಿ ಕಚೇರಿಗೆ ಧಾವಿಸುತ್ತಿದ್ದಾರೆ.
ತಮ್ಮ ಹೆಸರುಗಳನ್ನ ತಾತ್ಕಾಲಿಕವಾಗಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿರುವ ಥೈವಾನ್ನ ಜನತೆ ಗುರುತಿನ ಚೀಟಿಗಳಲ್ಲಿ ಹೆಸರಿನ ಜೊತೆ ಸಾಲ್ಮನ್ ಎಂಬ ಪದವನ್ನ ಸೇರಿಸಿಕೊಳ್ಳೋಕೆ ನೋಂದಣಿ ಕಚೇರಿಗೆ ಬರ್ತಿದ್ದಾರೆ. ಇವರೆಲ್ಲ ರೆಸ್ಟಾರೆಂಟ್ನಲ್ಲಿ ತಮಗೆ ಉಚಿತ ಸುಶಿ ಸಿಗಬಹುದು ಎಂಬ ನಂಬಿಕೆಯಲ್ಲಿದ್ದಾರೆ.
ಸುಶಿ ರೆಸ್ಟಾರೆಂಟ್ ಒಂದು ಯಾವ ವ್ಯಕ್ತಿ ಮೀನಿನ ಹೆಸರನ್ನ ಹೊಂದಿರುತ್ತಾರೆ ಅಂತವರಿಗೆ ಉಚಿತ ಖಾದ್ಯ ನೀಡೋದಾಗಿ ಹೇಳಿದೆ. ಮೀನಿನ ಹೆಸರನ್ನು ಹೊಂದಿರುವ ವ್ಯಕ್ತಿಯು ತನ್ನ ಐವರು ಸ್ನೇಹಿತರೊಂದಿಗೆ ಈ ಉಚಿತ ಆಫರ್ನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.
ವಿಶ್ವದ ಅತಿ ‘ಡೇಂಜರ್ ರೋಡ್’ ಪಟ್ಟಿಯಲ್ಲಿ ಇಷ್ಟನೇ ಸ್ಥಾನದಲ್ಲಿದೆ ಭಾರತ..!
ಈ ಆಫರ್ನ್ನು ಪಡೆಯಬೇಕು ಅಂತಾ ಈವರೆಗೆ 150ಕ್ಕೂ ಹೆಚ್ಚು ಮಂದಿ ತಮ್ಮ ಹೆಸರಿನ ಜೊತೆ ಮೀನಿನ ಹೆಸರನ್ನ ಸೇರಿಸಿಕೊಳ್ಳೋಕೆ ಸರ್ಕಾರಿ ಕಚೇರಿಗೆ ಧಾವಿಸುತ್ತಿದ್ದಾರೆ. ಥೈವಾನ್ ಪ್ರಜೆಗೆ ಆತನ ಜೀವಿತಾವಧಿಯಲ್ಲಿ ಮೂರು ಭಾರಿ ಅಧಿಕೃತವಾಗಿ ಹೆಸರನ್ನ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ.