alex Certify ಎಣ್ಣೆ ಬಾಕ್ಸ್‌ ತರುತ್ತಿದ್ದಂತೆ ಮುಗಿಬಿದ್ದು ಎತ್ತಿಕೊಂಡು ಹೋದ ಕುಡುಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆ ಬಾಕ್ಸ್‌ ತರುತ್ತಿದ್ದಂತೆ ಮುಗಿಬಿದ್ದು ಎತ್ತಿಕೊಂಡು ಹೋದ ಕುಡುಕರು

ದೇಶವೇಕೆ ಇಡೀ ವಿಶ್ವಕ್ಕೇ ಕರೋನಾದ್ದೇ ಚಿಂತೆಯಾದ್ರೆ, ನಮ್ಮ ಮದ್ಯಪ್ರಿಯರಿಗೆ ಮಾತ್ರ ಎಣ್ಣೆ ಬಾಟ್ಲದ್ದೇ ಚಿಂತೆಯಂತೆ ಎನ್ನುವಂತಿದೆ ಈ ವಿಡಿಯೋದಲ್ಲಿನ ಸನ್ನಿವೇಶ.

ಯಾವಾಗ ಲಾಕ್ ಡೌನ್ ಅನ್ನು ಸ್ವಲ್ಪ ಸಡಿಲ ಮಾಡಿದರೋ ಆಗ ಮದ್ಯಕ್ಕಾಗಿ ಜನ ಹೇಗೆ ಮುಗಿಬಿದ್ದು, ಸಾಮಾಜಿಕ ಅಂತರವನ್ನೂ ಲೆಕ್ಕಿಸದೆ, ಟಿನ್ ಗಟ್ಟಲೇ ಮದ್ಯವನ್ನು ಹೊತ್ತೊಯ್ದರು ಎಂಬ ವಿಡಿಯೋವನ್ನು ಖ್ಯಾತ ಕಮಿಡಿಯನ್ ಸುನಿಲ್ ಗ್ರೋವರ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅದೀಗ ಫುಲ್ ವೈರಲ್ ಆಗಿದೆ.

ಸೂಪರ್ ಮಾರ್ಕೆಟ್ ಒಂದನ್ನು ತೆರೆಯುತ್ತಿದ್ದಂತೆ ಸಾಲುಗಟ್ಟಿ ಅದರೊಳಗೆ ಪ್ರವೇಶಿಸಿದ್ದ ಜನರು ಬಿಯರ್ ತರುವುದನ್ನೇ ಕಾಯುತ್ತಿದ್ದರು. ಯಾವಾಗ ಅಂಗಡಿಯ ಸಿಬ್ಬಂದಿ ಬಿಯರ್ ತುಂಬಿದ ಬಾಕ್ಸ್ ಗಳನ್ನು ತಂದು ಜಾಗದಲ್ಲಿ ಸೇರಿಸಬೇಕು ಎಂದು ಒಂದು ಕಡೆ ಇಟ್ಟರೋ, ಮುಗಿದೇ ಹೋಯಿತು. ಅದರ ಸುತ್ತ ಇದ್ದ ಕವರ್ ಗಳನ್ನು ಜನರೇ ಹರಿದು ಬಾಕ್ಸ್ ಬಾಕ್ಸ್ ಗಳನ್ನೇ ಹೊತ್ತು ಕೌಂಟರ್ ನತ್ತ ಓಡುತ್ತಿದ್ದರು. ಅದರೊಳಗೂ ತಾಮುಂದು, ನಾಮುಂದು ಎಂದು ಮುಗಿಬಿದ್ದು ಎತ್ತಿಕೊಳ್ಳುತ್ತಿದ್ದರು. ಈ ವಿಡಿಯೋವನ್ನು ಸುನಿಲ್ ಪೋಸ್ಟ್ ಮಾಡಿದ್ದರು.

ಮದ್ಯದ ಮುಂದೆ ಸಾಮಾಜಿಕ ಅಂತರ ಅಥವಾ ವೈರಸ್ ಯಾವ ಲೆಕ್ಕ ಎಂಬುದನ್ನು ಈ ಲಾಕ್ ಡೌನ್ ಸಡಿಲಿಕೆ ಸಾಬೀತು ಮಾಡಿತು. ಅವುಗಳನ್ನೆಲ್ಲ ಮರೆಸಿ ಮದ್ಯವೇ ನಮ್ಮ ಆದ್ಯತೆ ಎಂಬುದನ್ನು ಕುಡುಕರು ತೋರಿಸಿಕೊಟ್ಟರು ಎಂದು ಸುನಿಲ್ ಬರೆದುಕೊಂಡಿದ್ದಾರೆ. ಅಂದಹಾಗೆ ಈ ಪ್ರಸಂಗ ನಡೆದಿರುವುದು ಥಾಯ್ಲೆಂಡ್ ನಲ್ಲಿ ಎಂದೂ ಗ್ರೋವರ್ ಹೇಳಿದ್ದಾರೆ. ಹಾಗಾಗಿ ಭಾರತದ ಕುಡುಕರು ಸ್ವಲ್ಪ ನಿಟ್ಟುಸಿರು ಬಿಡಬಹುದು.

View this post on Instagram

After the ban on alcohol lifted in Thailand

A post shared by Sunil Grover (@whosunilgrover) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...