alex Certify ಮಗು ಅತ್ತಿದ್ದಕ್ಕೆ ಪಕ್ಕದ ಮನೆಯವರಿಗೆ ಪತ್ರ ಬರೆದ ಫೋಷಕರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಅತ್ತಿದ್ದಕ್ಕೆ ಪಕ್ಕದ ಮನೆಯವರಿಗೆ ಪತ್ರ ಬರೆದ ಫೋಷಕರು..!

ಅಮೆರಿಕದ ದಂಪತಿಯೊಂದು ರಾತ್ರಿ ವೇಳೆ ಅಳುವ ಮಗುವಿಗಾಗಿ ತಮ್ಮ ನೆರೆ ಹೊರೆಯ ಮನೆಯವರಿಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದು ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.

ಮ್ಯಾಥ್ಯೂ ಹಾಗೂ ಕೆಲೀ ವಾರ್ಡ್​ ಈ ರೀತಿ ಅಕ್ಕಪಕ್ಕದ ಮನೆಯವರಿಗೆ ಪತ್ರ ಕಳಿಸುವ ಮೂಲಕ ಕ್ಷಮೆಯಾಚಿಸಿದ್ದಾರೆ. ಪತ್ರ ಸ್ವೀಕರಿಸಿದ ವ್ಯಕ್ತಿಯೊಬ್ಬರು ಇದನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪತ್ರದಿಂದ ಹೆಸರಿಸಲ್ಪಟ್ಟ, ಅಪಾರ್ಟ್ಮೆಂಟ್ನಲ್ಲಿ ಅವರ ನೆರೆಹೊರೆಯವರೊಬ್ಬರು ಅದರ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ನೀವೇನಾದರೂ ಮಗುವಿನ ಅಳುವಿನ ಶಬ್ದವನ್ನ ಕೇಳುತ್ತಿದ್ದರೆ ನಮಗಾಗಿ ಪ್ರಾರ್ಥಿಸಿ. ಏಕೆಂದರೆ ನಾವೂ ಇಲ್ಲಿ ತೊಂದರೆ ಅನುಭವಿಸಿದ್ದೇವೆ. ಈ ತೊಂದರೆ ಜಾಸ್ತಿ ದಿನ ಇರಲ್ಲ ಎಂಬ ನಂಬಿಕೆ ಇದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಪತ್ರವನ್ನ ಟ್ವಿಟರ್​ನಲ್ಲಿ ಶೇರ್ ಮಾಡಿರುವ ಕಿಟ್ಟಿ ಎಂಬವರು, ನಮ್ಮ ಮನೆಯ ಮುಂದೆ ಈ ಪತ್ರವನ್ನ ಇಡಲಾಗಿತ್ತು. ಇದನ್ನ ಓದಿ ನನಗೆ ಅಳುವೇ ಬಂತು. ನಾನೀಗ ಆ ಪೋಷಕರಿಗಾಗಿ ಕುಕ್ಕಿ ತಯಾರು ಮಾಡಲಿದ್ದೇನೆ ಎಂದು ಶೀರ್ಷಿಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...