alex Certify BIG BREAKING: ಹೊಣೆ ಹೊತ್ತ ಪಾಕ್, ಪುಲ್ವಾಮ ದಾಳಿ ಇಮ್ರಾನ್ ಸರ್ಕಾರದ ದೊಡ್ಡ ಸಾಧನೆಯಂತೆ..! ಸಂಸತ್ ನಲ್ಲೇ ಸಚಿವನ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹೊಣೆ ಹೊತ್ತ ಪಾಕ್, ಪುಲ್ವಾಮ ದಾಳಿ ಇಮ್ರಾನ್ ಸರ್ಕಾರದ ದೊಡ್ಡ ಸಾಧನೆಯಂತೆ..! ಸಂಸತ್ ನಲ್ಲೇ ಸಚಿವನ ಹೇಳಿಕೆ

ಇಸ್ಲಾಮಾಬಾದ್: ಪುಲ್ವಾಮ ಉಗ್ರರ ದಾಳಿಯ ಹೊಣೆಯನ್ನು ಪಾಕಿಸ್ತಾನ ಹೊತ್ತುಕೊಂಡಿದೆ. ಪಾಕಿಸ್ತಾನದ ಸಂಸತ್ ನಲ್ಲಿ ಸರ್ಕಾರದ ವತಿಯಿಂದಲೇ ಈ ಕುರಿತಂತೆ ಹೇಳಿಕೆ ನೀಡಲಾಗಿದೆ.

ಪುಲ್ವಾಮಾ ದಾಳಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಸಾಧನೆಯಾಗಿದೆ ಎಂದು ಪಾಕಿಸ್ತಾನ ಸಂಸತ್ ಸಚಿವ ಪವಾದ್ ಚೌಧರಿ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿರುವುದನ್ನು ಪಾಕ್ ಸರ್ಕಾರವೇ ಒಪ್ಪಿಕೊಂಡಿದೆ. ಪುಲ್ವಾಮ ದಾಳಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪವಾರ್ ಚೌಧರಿ ಹೇಳಿಕೆ ನೀಡಿದ್ದಾರೆ.

ಪುಲ್ವಾಮ ಭಯೋತ್ಪಾದಕರ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸುತ್ತಿದ್ದ ಪಾಕಿಸ್ತಾನ ಸುಳ್ಳು ಹೇಳುತ್ತಿತ್ತು. ಈಗ ಇಮ್ರಾನ್ ಖಾನ್ ಮಂತ್ರಿ ಮಂಡಲದ ಸಚಿವರೇ ಇದನ್ನು ಒಪ್ಪಿಕೊಂಡಿದ್ದು ಇಮ್ರಾನ್ ಖಾನ್ ಆಡಳಿತದ ನಿರ್ದೇಶನದ ಮೇರೆಗೆ ಭೀಕರ ದಾಳಿ ನಡೆಸಲಾಗಿತ್ತು ಎಂದು ಸಚಿವ ಚೌಧರಿ ಹುಸೇನ್ ತಿಳಿಸಿದ್ದು, ಪುಲ್ವಾಮ ದಾಳಿಯನ್ನು ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ದೊಡ್ಡ ಸಾಧನೆ ಎಂದು ಹೇಳಿದ್ದಾರೆ.

ನಾವು ಭಾರತದ ಪ್ರದೇಶದೊಳಗೆ ನುಗ್ಗಿ ಯಶಸ್ಸಿನ ಕಾರ್ಯಾಚರಣೆ ನಡೆಸಿದ್ದು ನಾವೆಲ್ಲರೂ ಯಶಸ್ಸಿನ ಭಾಗವಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. 2019 ಫೆಬ್ರವರಿ 14ರಂದು ಶ್ರೀನಗರ -ಜಮ್ಮು ಹೆದ್ದಾರಿಯಲ್ಲಿ ಸಿಆರ್ಪಿಎಫ್ ವಾಹನಕ್ಕೆ ಭಾರೀ ಪ್ರಮಾಣದ ಸ್ಪೋಟಕ ತುಂಬಿದ್ದ ವಾಹನ ಡಿಕ್ಕಿ ಹೊಡೆಸಲಾಗಿತ್ತು. ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...