alex Certify 2020ಕ್ಕೆ ’ವರ್ಡ್ ಆಫ್ ದ ಇಯರ್‌’ ಹುಡುಕುವುದು ಕಷ್ಟವೆಂದ ಆಕ್ಸ್‌ಫರ್ಡ್‌ ನಿಘಂಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020ಕ್ಕೆ ’ವರ್ಡ್ ಆಫ್ ದ ಇಯರ್‌’ ಹುಡುಕುವುದು ಕಷ್ಟವೆಂದ ಆಕ್ಸ್‌ಫರ್ಡ್‌ ನಿಘಂಟು

ತನ್ನ ಸಂಪ್ರದಾಯದಂತೆ ಈ ವರ್ಷಕ್ಕೂ ಸಹ ಏಕೈಕ ಸೂಕ್ತ ಪದವನ್ನು ಹುಡುಕಲು ಹೊರಟ ಆಕ್ಸ್‌ಫರ್ಡ್ ಇಂಗ್ಲಿಷ್‌ ಶಬ್ದಕೋಶದ ವ್ಯವಸ್ಥಾಪಕರಿಗೆ ಅಂಥ ಒಂದೇ ಒಂದು ಪದ ಸಿಗಲಿಲ್ಲವಂತೆ.

2020ರ ವರ್ಷಕ್ಕೆ ’ವರ್ಡ್ ಆಫ್‌ ದ ಇಯರ್‌’ ಆಗಿ ಏಕೈಕ ಪದವನ್ನು ಶೋಧಿಸಲು ತಮಗೆ ಸಾಧ್ಯವಾಗಿಲ್ಲ ಎಂದು ಆಕ್ಸ್‌ಫರ್ಡ್ ವರದಿ ತಿಳಿಸಿದ್ದು, ’ಅನಿಶ್ಚಿತತೆಯ ವರ್ಷ’ ಎನ್ನುವ ಅರ್ಥ ಕೊಡುವ ಪದಗಳ ಶೋಧ 2020ರಲ್ಲಿ ಎಂದಿಗಿಂತ ಹೆಚ್ಚಾಗಿಯೇ ಇದೆ ಎಂದಿದೆ.

ಕೊರೋನಾ ವೈರಸ್‌ಗೆ ಸಂಬಂಧಿಸಿದ ಪದಗಳ ಶೋಧವನ್ನು ಈ ವರ್ಷ ಸಿಕ್ಕಾಪಟ್ಟೆ ಮಾಡಲಾಗಿದ್ದು, ಹಿಂದೆಂದಿಗಿಂತಲೂ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಕೇಳರಿಯದ ಪದಗಳು ಶಬ್ದಕೋಶಕ್ಕೆ ಸೇರಿಕೊಂಡಿವೆ ಎಂದು ಆಕ್ಸ್‌ಫರ್ಡ್ ಡಿಕ್ಷನರಿಯ ಅಧ್ಯಕ್ಷ ಕ್ಯಾಸ್ಪರ್‌ ಗ್ರಾಥಾಲ್ ತಿಳಿಸಿದ್ದಾರೆ.

ಸಂಪೂರ್ಣ ಹೊಸ ಪದವಾಗಿ ’ಕೋವಿಡ್-19’ ಶಬ್ದಕೋಶಕ್ಕೆ ಸೇರಿಕೊಂಡ ಬೆನ್ನಿಗೇ, ಲಾಕ್‌ಡೌನ್, ಸಾಮಾಜಿಕ ಅಂತರ, ಮುಖದ ಮಾಸ್ಕ್‌ಗಳು, ಸರ್ಕ್ಯೂಟ್‌ ಬ್ರೇಕರ್‌‌, ಪಿಪಿಇನಂಥ ಪದಗಳು ಸಹ ಹೆಚ್ಚು ಬಳಕೆಗೆ ಬಂದಿವೆ. ಒಂದಷ್ಟು ದಿನಗಳ ಮಟ್ಟಿಗೆ ’ಸೂಪರ್‌ ಸ್ಪ್ರೆಡರ್‌’ ಪದವೂ ಸಹ ಸಾಕಷ್ಟು ಸದ್ದು ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...