alex Certify ಮದ್ಯದ ಅಮಲಿನಲ್ಲಿ ಬರ್ಗರ್​ ಆರ್ಡರ್​ ಮಾಡಿದ್ದ ಮಹಿಳೆಗೆ ಸಿಕ್ಕಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಿನಲ್ಲಿ ಬರ್ಗರ್​ ಆರ್ಡರ್​ ಮಾಡಿದ್ದ ಮಹಿಳೆಗೆ ಸಿಕ್ಕಿದ್ದೇನು ಗೊತ್ತಾ….?

ಬರ್ಗರ್​ ಅಂದ್ರೆ ಅದರಲ್ಲಿ ಬನ್, ಈರುಳ್ಳಿ, ಪಾಲಾಕ್​, ಚೀಸ್​, ಚಿಕನ್​ ಹಿಂಗೆ ಸಾಕಷ್ಟು ಪದಾರ್ಥಗಳನ್ನ ಹಾಕಲಾಗುತ್ತೆ. ಮೆಕ್​ಡಿಗೆಲ್ಲ ನೀವು ಹೋದ್ರಂತೂ ಕೇಳಿದ ಫ್ಲೇವರ್​ನಲ್ಲಿ ತರಹೇವಾರಿ ಬರ್ಗರ್​​ಗಳ ಲಿಸ್ಟ್​ನ್ನೇ ಇಟ್ಟು ಬಿಡ್ತಾರೆ. ಆದರೆ ಕೆನಡಾದಲ್ಲಿ ಬರ್ಗರ್​ ಆರ್ಡರ್​ ಮಾಡಿದ್ದ ಮಹಿಳೆಗೆ ಮೆಕ್​ಡಿ ಅವರು 2 ಕೆಚಪ್​ ಪಾಕೆಟ್​ಗಳನ್ನಷ್ಟೇ ಕಳುಹಿಸಿ ಕೊಟ್ಟಿದ್ದಾರಂತೆ.

ಪತಿಯ ಜೊತೆ ಎಣ್ಣೆ ಪಾರ್ಟಿ ಮಾಡಿದ್ದ ಕಟೈ ಪೂಲೆ ಎಂಬ ಹೆಸರಿನ ಮಹಿಳೆ ಮೆಕ್ ​ಡಿಗೆ ಕಾಲ್​ ಮಾಡಿದ್ದಾರೆ. ಬರ್ಗರ್​ ಆರ್ಡರ್​ ಮಾಡುವ ವೇಳೆ ಅದಕ್ಕೆ ಈರುಳ್ಳಿ, ಸಾಸ್ , ಚೀಸ್​ ಹಾಕಬಾರದು ಅಂದಿದ್ದಾಳೆ. ಇಷ್ಟಕ್ಕೆ ಹೇಳಿದ್ರೆ ಮೆಕ್​‌ ಡಿ ಏನಾದರೊಂದು ಬರ್ಗರ್​ ಕಳುಹಿಸ್ತಾ ಇತ್ತೋ ಏನೋ ಆದರೆ ಈಕೆ ಬನ್​ ಮತ್ತೆ ಹ್ಯಾಮ್​ ಬರ್ಗರ್​ ಕೂಡ ಹಾಕಬಾರದು ಅಂತಾ ಹೇಳಿದ್ದಾಳೆ.

ಈಕೆಯ ಕಂಡಿಷನ್​ ಎಲ್ಲಾ ಕೇಳಿದ ಮೆಕ್ ​ಡಿ ಬಿಲ್​ ಸಮೆತ 2 ಕೆಚಪ್​ ಪ್ಯಾಕೆಟ್​ಗಳನ್ನ ಕಳುಹಿಸಿಕೊಟ್ಟಿದೆ. ಈಕೆಯ ಪತಿ ಮೆಕ್ ​ಡಿ ಬಿಲ್​ ಸಮೇತ ಎರಡು ಕೆಚಪ್​​ ಪ್ಯಾಕೆಟ್​ಗಳ ಫೋಟೋ ಹಾಕಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. 2 ಪ್ಯಾಕೆಟ್​ ಕೆಚಪ್​ ಕಳುಹಿಸಿದ್ರೂ ಸಹ ಮೆಕ್​ ಡೊನಾಲ್ಡ್ ಬರ್ಗರ್​ ಹಣವನ್ನ ಪಾವತಿ ಮಾಡಿಸಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...