alex Certify ಹಿರಿಯ ಜೀವದ ಸಂದೇಶ ನೋಡಿ ಭಾವುಕರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ಜೀವದ ಸಂದೇಶ ನೋಡಿ ಭಾವುಕರಾದ ನೆಟ್ಟಿಗರು

ಬ್ರಿಟನ್ ‌ನ ಪೂರ್ವ ಹ್ಯಾಂಪ್‌ಶೈರ್‌ನ ವೃದ್ಧರೊಬ್ಬರು ತಮ್ಮ ಮನೆಯ ಕಿಟಕಿಯಲ್ಲಿ ಭಾವನಾತ್ಮಕ ಅಪೀಲ್‌ ಒಂದನ್ನು ಕಿಟಕಿಯಲ್ಲಿ ಪೋಸ್ಟರ್‌ ಒಂದರ ಮೂಲಕ ಮಾಡಿಕೊಂಡಿದ್ದಾರೆ.

ಟೋನಿ ವಿಲಿಯಮ್ಸ್‌ ಹೆಸರಿನ 75 ವರ್ಷದ ಈ ವೃದ್ಧ ನಿವೃತ್ತ ಫಿಸಿಸ್ಟ್ ಆಗಿದ್ದಾರೆ. ಟೋನಿ ಮಡದಿ ಜೋ ಇದೇ ಮೇ ತಿಂಗಳಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಟೋನಿಗೆ ಮಕ್ಕಳಾಗಲೀ, ಸಂಬಂಧಿಕರಾಗಲೀ ಹತ್ತಿರದಲ್ಲಿ ಇಲ್ಲದೇ ಇರುವ ಕಾರಣ ಏಕಾಂತ ಕಾಡಲು ಆರಂಭಿಸಿದೆ.

“ನಾನು ನನ್ನ ಮುದ್ದಿನ ಮಡದಿ ಹಾಗೂ ಆತ್ಮಸಂಗಾತಿ ʼಜೋʼಳನ್ನು ಕಳೆದುಕೊಂಡಿದ್ದೇನೆ. ನನಗೆ ಸ್ನೇಹಿತರು ಹಾಗೂ ಕುಟುಂಬವಿಲ್ಲ, ಮಾತನಾಡಲು ಯಾರೂ ಹತ್ತಿರದಲ್ಲಿ ಇಲ್ಲ. ಈ ನೀರವ ಮೌನದಲ್ಲಿ ದಿನದ 24 ಗಂಟೆಗಳನ್ನು ಕಳೆಯುವುದು ನನಗೆ ಬಹಳ ಕಷ್ಟವಾಗುತ್ತಿದೆ. ಯಾರಾದರೂ ನನಗೆ ಸಹಾಯ ಮಾಡುವಿರಾ?” ಎಂದು ಪೋಸ್ಟರ್‌ನಲ್ಲಿ ಟೋನಿ ಹಾಕಿಕೊಂಡಿದ್ದಾರೆ. ಟೋನಿರ ಈ ಭಾವನಾತ್ಮಕ ಸಂದೇಶವನ್ನು ಓದಿದ ನೆಟ್ಟಿಗರು ಮಮ್ಮಲ ಮರುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...